ಧರ್ಮಸ್ಥಳ: ನೂರೈವತ್ತು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಮುಂಬೈನ ಖ್ಯಾತ ಆಯುರ್ವೇದ ಸಂಸ್ಥೆಯಾದ ಶ್ರೀ ಧೂತಪಾಪೇಶ್ವರ್ ಲಿಮಿಟೆಡ್ ತಯಾರಿಸಿದ ಮಹಾ ಸ್ವರ್ಣಯೋಗ ಔಷಧಿಯನ್ನು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಆರೋಗ್ಯ ಭಾಗ್ಯ ರಕ್ಷಣೆಗೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮಹಾಸ್ವರ್ಣ ಯೋಗ ಸಹಕಾರಿಯಾಗಿದೆ ಎಂದು ಅವರು ಹೇಳಿ ಶುಭ ಹಾರೈಸಿದರು.
ಆಯುರ್ವೇದ ಸಂಸ್ಥೆಯ ಆಡಳಿತ ನಿರ್ದೇಶಕ ರಂಜಿತ್ ಪುರಾಣಿಕ್ ಮಾತನಾಡಿ, ಮಹಾ ಸ್ವರ್ಣ ಯೋಗ ಕೇವಲ ಔಷಧಿ ಮಾತ್ರವಲ್ಲ. ಪರಿಪೂರ್ಣ ಚಿಕಿತ್ಸಾ ವಿಧಾನವಾಗಿದೆ. ಸಣ್ಣ ಶಿಶುಗಳಿಂದ 16 ವರ್ಷ ಪ್ರಾಯದ ಮಕ್ಕಳಿಗೆ ಈ ಔಷಧಿ ನೀಡಬಹುದು ತಮ್ಮ ಸಂಸ್ಥೆಯು ಪ್ರಮಾಣೀಕೃತ, ಸುರಕ್ಷಿತ, ಹಾಗೂ ಪರಿಣಾಮಕಾರಿ ಔಷಧಿಗಳನ್ನು ತಯಾರಿಸುವಲ್ಲಿ ಬದ್ಧವಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಮಾರಾಟ ನಿರ್ವಾಹಕ ಕೆ. ಎ. ನಾಯಕ್ ಮಾತನಾಡಿ, ಹೊಸ ಔಷಧವು ಅತ್ಯಂತ ಶುದ್ಧವಾಗಿದ್ದು, ಪರಿಣಾಮಕಾರಿಯಾಗಿ ರ್ದೀಘಕಾಲ ಬಳಕೆಗೆ ಸೂಕ್ತವಾಗಿದೆ ಎಂದು ಹೇಳಿದರು.
ಹಾಸನದ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ಡಾ. ಶೈಲಜ ಶುಭಾಶಂಸನೆ ಮಾಡಿ ಸ್ವರ್ಣ ಪ್ರಾಶನದಿಂದ ಮಕ್ಕಳ ಬುದ್ಧಿಶಕ್ತಿ, ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗುತ್ತದೆ. ಪ್ರಾಚೀನ ಕಾಲದಿಂದಲೂ ಸ್ವರ್ಣ ಭಸ್ಮವನ್ನು ಜೇನುತುಪ್ಪ ಹಾಗೂ ತುಪ್ಪದಲ್ಲಿ ಕಲಸಿ ಮಕ್ಕಳಿಗೆ ಕೊಡಲಾಗುತ್ತಿತ್ತು. ಪ್ರತಿ ತಿಂಗಳು ಪುಷ್ಯಾ ನಕ್ಷತ್ರದಂದು ಸ್ವರ್ಣ ಪ್ರಾಶನ ಮಾಡಲಾಗುತ್ತದೆ ಎಂದು ಹೇಳಿದರು.
ಮಹಾ ಸ್ವರ್ಣ ಯೋಗ ಆಯುರ್ವೇದ ಔಷಧಿಯನ್ನು ವೈದ್ಯರು ಆನ್‌ಲೈನ್ ಮೂಲಕ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:  www.sdlindia.com , ಈಮೈಲ್: healthcare @sdlindia.com

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here