ಬಂಟ್ವಾಳ : ಭಾರತ ಜಗದ್ಗುರು ಆಗುವ ಕಾಲ ಸನ್ನಿಹಿತವಾಗಿದ್ದು, ಇಡೀ ಭಾರತ ಅವರನ್ನು ಅಭೂತಪೂರ್ವವಾಗಿ ಬೆಂಬಲಿಸಿದ್ದೇ ಇದಕ್ಕೆ ನಿದರ್ಶನ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.

ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಎರಡನೇ ಬಾರಿ ಪ್ರಮಾಣವಚನ ಸ್ವೀಕರಿಸಿದ ಸಂಭ್ರಮದ ಅಂಗವಾಗಿ ಸ್ಥಾಪಿಸಲಾದ ಸಜಿಪ ಜನಸೇವಾ ಚಾರಿಟೇಬಲ್ ಟ್ರಸ್ಟ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಜಾತಿ, ಧರ್ಮ, ಭಾಷೆ, ಮತೀಯ ರಾಜಕಾರಣಕ್ಕೆ ಮುಕ್ತಿ ನೀಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರದ್ದು ಎಂದ ಅವರು, ಚಂದ್ರಗುಪ್ತ, ಹರ್ಷವರ್ಧನ , ಕೃಷ್ಣದೇವರಾಯನ ಕಾಲದ ಸುವರ್ಣ ವೈಭವ ಮೋದಿ ಕಾಲದಲ್ಲಿ ಭಾರತಕ್ಕೆ ಮರುಕಳಿಸಿದೆ ಎಂದರು.
ದೇಶಕ್ಕಾಗಿ ಬದುಕಬೇಕು ಎಂಬುದನ್ನು ತನ್ನ ನಡವಳಿಕೆಯ ಮೂಲಕ ತೋರಿಸಿಕೊಟ್ಟ ಯುಗಪುರುಷ ಮೋದಿಯವರತ್ತ ಇಡೀ ಜಗತ್ತು ನೋಡುತ್ತಿದೆ, ಇದು ಭಾರತೀಯರೆಲ್ಲರೂ ಹೆಮ್ಮೆಪಡುವ ವಿಚಾರ ಎಂದರು.
ಸಜಿಪ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ರಾದ ಮುಳ್ಳುಂಜ ವೆಂಕಟೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಮಂಗಳೂರು ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಬಂಟ್ವಾಳ ಬಿಜೆಪಿ ಉಪಾಧ್ಯಕ್ಷ ಶ್ರೀಕಾಂತ ಶೆಟ್ಟಿ,
ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಎಂ.ಸುಬ್ರಹ್ಮಣ್ಯ ಭಟ್, ಸಜಿಪಮೂಡ ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಬೆಲ್ಚಡ ಕೂಡೂರು, ಸೀತಾರಾಮ ಶೆಟ್ಟಿ, ವಿಜಯ ಶಂಕರ ರೈ, ರಾಧಾಕೃಷ್ಣ ಆಳ್ವ, ಪ್ರದೀಪ್ ಶೆಟ್ಟಿ, ಸುನೀತಾ ಶೆಟ್ಟಿ, ಚಿನ್ನಯ್ಯ ಸಾಲಿಯಾನ್ ಸುರೇಶ್ ಸಾರ್ತಾವು, ವೇದಿಕೆಯಲ್ಲಿದ್ದರು.
ಟ್ರಸ್ಟ್ ಅಧ್ಯಕ್ಷ ಯಶವಂತ ದೇರಾಜೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಆರ್ಥಿಕ ವಾಗಿ ಹಿಂದುಳಿದವರ ಸೇವೆಗೆ ಟ್ರಸ್ಟ್ ಸದಾ ಸಿದ್ಧವಾಗಿದ್ದು , ಪ್ರತಿ ತಿಂಗಳು ಜನೋಪಯೋಗಿ ಕಾರ್ಯಕ್ರಮ ಆಯೋಜಿಸಲಿದೆ ಎಂದರು.
ವಸಂತ ಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು. ಸುರೇಶ್ ಬಂಗೇರ ವಂದಿಸಿದರು. ಟ್ರಸ್ಟ್ ಸದಸ್ಯರಾದ ಮಹೇಶ್ ಕಿಲ್ಲೆ, ದೀಪಕ್, ಗಣೇಶ್ ಕಾರಾಜೆ, ಲೋಹಿತ್ ಪನೋಲಿಬೈಲು,ವಿಠಲ್ ತಲೆಮೊಗರು, ನವೀನ್ ಅಂಚನ್, ಯಶವಂತ ನಗ್ರಿ, ಹರೀಶ್ ಬಂಗೇರ,ನವೀನ್ ಸುವರ್ಣ, ಭಾಸ್ಕರ, ಲಿಂಗಪ್ಪ ದೋಟ ಮೊದಲಾದವರು ಸಹಕರಿಸಿದರು.
ಇದೇ ಸಂದರ್ಭ ಸಜಿಪನಡು, ಸಜಿಪಪಡು, ಸಜಿಪಮೂಡ ಹಾಗೂ ಸಜಿಪಮುನ್ನೂರು ಗ್ರಾಮಗಳ 400ಕ್ಕೂ ಅಧಿಕ ಶಾಲಾಮಕ್ಕಳಿಗೆ ಪುಸ್ತಕ ವಿತರಿಸಲಾಯಿತು.