Sunday, October 22, 2023

ಪಿಕಪ್ ಢಿಕ್ಕಿ: ಮುಖ್ಯ ಶಿಕ್ಷಕ ಸಾವು

Must read

ಬಂಟ್ವಾಳ: ಹಿಮ್ಮುಖವಾಗಿ ಚಲಿಸುತ್ತಿದ್ದ ಪಿಕಪ್ ವಾಹನ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಮುಕುಡ ನಿವಾಸಿ, ಸಿದ್ದಕಟ್ಟೆ ಸೈಂಟ್ ಪ್ಯಾಟ್ರಿಕ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಜಾನ್ ಡಿಸೋಜ(೫೩)ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟ ಘಟನೆ ಮೇ ೧೬ರಂದು ಸಂಭವಿಸಿದೆ.
ಮೇ ೧೩ರಂದು ಸಿದ್ದಕಟ್ಟೆ ಚರ್ಚ್ ಮೈದಾನದಲ್ಲಿ ಅವರು ನಿಂತಿರುವಾಗ ಹಿಮ್ಮುಖವಾಗಿ ಚಲಿಸಿದ ಪಿಕಪ್ ಜಾನ್ ಅವರಿಗೆ ಢಿಕ್ಕಿಯಾಗಿತ್ತು. ಗಂಭೀರ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೇ ೧೬ರಂದು ಮೃತಪಟ್ಟಿದ್ದಾರೆ.
ಮೃತರ ಪತ್ನಿ ಈ ಹಿಂದೆ ಮೃತ ಪಟ್ಟಿದ್ದು, ಪುತ್ರಿಯನ್ನು ಅಗಲಿದ್ದಾರೆ. ಘಟನೆ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More articles

Latest article