ಬಂಟ್ವಾಳ: ಅಪಘಾತ ದಿಂದ ಕಾಲು ಕಳೆದುಕೊಂಡ ವ್ಯಕ್ತಿ ಯೋರ್ವರ ಚಿಕಿತ್ಸೆ ಗೆ ಸ್ಪಂದಿಸಿ  ಹಾಗೂ ಕಾಲು ಜೋಡಣೆಗಾಗಿ   ಧನ ಸಹಾಯ ಮಾಡಿದ ತುಂಬೆ ವಲಯ ಕಾಂಗ್ರೇಸ್.
ಬಂಟ್ವಾಳ ತಾಲೂಕಿನ ತುಂಬೆ ಸಮೀಪದ ಬಾಳೆಹಿತ್ಲು ನಿವಾಸಿ ಗೋಪಾಲ ಕುಲಾಲ್ ಅವರು ಕೆಲ ದಿನಗಳ ಹಿಂದೆ ಬಿಸಿರೋಡಿನ ಪ್ಲೈ ಒವರ್ ನಲ್ಲಿ ಬೈಕ್ ಅಪಘಾತಕ್ಕೊಳಗಾಗಿ ಬಲದ ಕಾಲು ಕಳೆದು ಕೊಂಡಿದ್ದರು.
ಬಳಿಕ ಕೆಲವು ಸಮಯದಿಂದ ಇವರು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಮನೆಯಲ್ಲಿದ್ದಾರೆ.
ಕಾಲು ಕಳೆದು ಕೊಂಡ ಗೋಪಾಲ ಅವರಿಗೆ ಸದ್ಯದ ಪರಿಸ್ಥಿತಿಯಲ್ಲಿ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ, ಜೊತೆಗೆ ಮನೆಯ ಪರಿಸ್ಥಿತಿಯನ್ನು ನಿಭಾಯಿಸುವ ಜವಬ್ದಾರಿ ಇವರ ಮೇಲಿದೆ.
ಆಸ್ಪತ್ರೆ ಯ ಖರ್ಚು ಹಾಗೂ ಮನೆಯ ಖರ್ಚು ಎರಡನ್ನು ಸರಿತೂಗಿಸಲು ಇವರಿಗೆ ಕಷ್ಟವಾಗುತ್ತಿದೆ.

ಅವರ ಕಾಲಿಗೆ ಕೃತಕ ಕಾಲು ಜೋಡಣೆಗಾಗಿ ಹಾಗೂ
ಇವರ ಕಷ್ಟವನ್ನು ಅರಿತ ತುಂಬೆ ವಲಯ ಕಾಂಗ್ರೇಸ್ ಮತ್ತು ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅವರ ನೇತ್ರತ್ವದಲ್ಲಿ 50 ಸಾವಿರ ರೂನಗದು ನೀಡಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂ.ಸದಸ್ಯರದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಡಿ.ಸಿ.ಸಿ ಕಾರ್ಯದರ್ಶಿ ಮೋನಪ್ಪ ಮಜಿ,ಮುಡಿಪ್ಪು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅದ್ಯಕ್ಷರದ ಇಮ್ತಿಯಾಜ್ ತುಂಬೆ,ತುಂಬೆ ವಲಯ ಕಾಂಗ್ರೆಸ್ ಅದ್ಯಕ್ಷರದ ಗಣೇಶ್ ಸಾಲ್ಯಾನ್,ಮುಡಿಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾದ ದೇವದಾಸ್ ಪರ್ಲಿಕ್ಕೆ,ಗ್ರಾ.ಪಂ ಮಾಜಿ ಉಪಾದ್ಯಕ್ಷರದ ಗೋಪಾಲಕೃಷ್ಣ ತುಂಬೆ ಹಾಗೂ ಕಾಂಗ್ರೆಸ್ ನಾಯಕರುಗಳಾದ ನಿಸಾರ್ ಅಹಮ್ಮದ್,ಮಹಾಬಲ ಮಜಿ,ಅಬ್ದುಲ್ ರಶೀದ್,ಜಗದೀಶ್ ಗಟ್ಟಿ ಪರ್ಲಿಕ್ಕೆ , ಪ್ರಕಾಶ್ ಶೆಟ್ಟಿ ಶ್ರೀ ಶೈಲಾ ಇತರರು ಉಪಸ್ಥರಿದ್ದರು…

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here