Wednesday, October 18, 2023

ಅರ್ಕುಳ ಬೀಡಿನಲ್ಲಿ ಉಚಿತಪುಸ್ತಕ ವಿತರಣೆ

Must read

ಬಂಟ್ವಾಳ: ಮಕ್ಕಳಿಗೆ ಸರಿಯಾದ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಿದಾಗ  ಸಶಕ್ತ ವಿಧ್ಯಾವಂತ ಯುವ ಜನಾಂಗ ಮೂಡಿ ಬರಲು ಸಾಧ್ಯ ಎಂದು ಫರಂಗಿಪೇಟೆಯ ಧಾರ್ಮಿಕ ಮುಂದಾಳು ತಾರಾನಾಥ ಕೊಟ್ಟಾರಿ ತಿಳಿಸಿದರು.                                       ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದ ಆವರಣದಲ್ಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ  ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣಾಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬಂಟ್ವಾಳ ತಾಲೂಕು ಬಿಎಸ್ಸೆನೆಲ್ ಮಾರುಕಟ್ಟೆ ಅಧಿಕಾರಿ ಕಂಪ ಸದಾನಂದ ಆಳ್ವ ಅವರು  ಮಾತನಾಡಿ ಇಂದಿನ ವಿಧ್ಯಾರ್ಥಿಗಳಿಗೆ ವಿಧ್ಯಾಭ್ಯಾಸ ಹಾಗೂ ಉದ್ಯೋಗಕ್ಕೆ ವಿಪುಲ ಅವಕಾಶಗಳಿದ್ದು ವಿಧ್ಯಾರ್ಥಿಗಳು ಹಾಗೂ ಹೆತ್ತವರು ಈ ಬಗ್ಗೆ ತಿಳಿದುಕೊಂಡು ಕಾರ್ಯೋನ್ಮುಕರಾಗಬೇಕು ಎಂದರು.
ಅರ್ಕುಳ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ  ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅರ್ಕುಳಗ್ರಾಮ ಪಂಚಾಯತ್ ಉಪಾಧ್ಯಕ್ಷೆ  ಆಶಾ ಪ್ರಕಾಶ್, ಮನೋಜ್ ತುಪ್ಪೆಕಲ್ಲು, ಆಶಾ ತುಪ್ಪೆಕಲ್ಲು ಮೊದಲಾದವರಿದ್ದರು. ಮಂಟಮೆ ದಿನಕರ ಕರ್ಕೇರ ನಿರ್ವಹಿಸಿದರು. ಸ್ವ-ಸಹಾಯ ಗುಂಪುಗಳ ಮೇಲ್ವಿಚಾರಕಿ  ಶೋಭಾ ಅವರು ವಂದಿಸಿದರು.

More articles

Latest article