ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪಟ್ಟಾಭಿಷಿಕ್ತರಾಗಿ ಪ್ರಥಮವಾಗಿ ಬಂಟ್ವಾಳ ಬಸದಿಯ ಜೀರ್ಣೋದ್ಧಾರವನ್ನು ಕೈಗೊಂಡು ಪಂಚಕಲ್ಯಾಣ ಪೂರ್ವಕ ಪ್ರತಿಷ್ಠೆ ನಡೆಸಿ 50 ವರ್ಷಗಳು ಕಳೆದಿವೆ. ಪ್ರತೀ ವರ್ಷವೂ ಬಸದಿಯ ಪೂಜಾ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ನಡೆಸುತ್ತಾ, ಪ್ರಸ್ತುತ 50 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಆಚರಿಸಲು ನಿರ್ಧರಿಸಿರುತ್ತಾರೆ. ಆ ಪ್ರಯುಕ್ತ
ದಿನಾಂಕ 24.05.2019 ಶುಕ್ರವಾರದಿಂದ 26.05.2019 ಭಾನುವಾರದ ತನಕ ಭ.1008 ಶ್ರೀ ಆದಿನಾಥ ತೀರ್ಥಂಕರ ಜಿನ ಚೈತ್ಯಾಲಯ, ಬಂಟ್ವಾಳ, ಇದರ 50ನೇ ಪ್ರತಿಷ್ಠಾ ವರ್ಧಂತ್ಯುತ್ಸವವು ಪರಮ ಪೂಜ್ಯ ಸ್ವಸ್ತಿಶ್ರೀ ಭಾರತ ಭೂಷಣ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳವರು , ಶ್ರೀ ಜೈನ ಮಠ ಮೂಡುಬಿದಿರೆ, ಇವರ ಪಾವನ ಸಾನ್ನಿಧ್ಯದಲ್ಲಿ 3 ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀಮತಿ ಮತ್ತು ಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬಸ್ಥರು ನೆರವೇರಿಸಲಿದ್ದಾರೆ.
ದಿನಾಂಕ 24.05.2019 ರಂದು ತೋರಣ ಮುಹೂರ್ತ, ವಿಮಾನ ಶುದ್ಧಿ, ಮುಖ ವಸ್ತ್ರ ಉದ್ಘಾಟನೆ, ಕ್ಷೇತ್ರ ಪಾಲ ಪ್ರತಿಷ್ಠೆ, ನಾಗ ಪ್ರತಿಷ್ಠೆ, 24 ಕಲಶ ಅಭಿಷೇಕ, ಮಹಾಪೂಜೆ, ನಾಂದಿ ಮಂಗಳ ವಿಧಾನ.
ದಿನಾಂಕ 25.05.2019 ರಂದು ವಾಸ್ತು ಪೂಜೆ, ನವಗ್ರಹ ಶಾಂತಿ, ಮುಖ ವಸ್ತ್ರ ಉದ್ಘಾಟನೆ, ಮಂಗಳಾರತಿ, ಮಹಾ ಮಾತೆ ಪದ್ಮಾವತಿ ದೇವಿಯ ಪದ್ಮಾವತಿ ಆರಾಧನೆ ಮತ್ತು ಪದ್ಮಾವತಿ ಪ್ರತಿಷ್ಠೆ, ಮಹಾ ಮಾತೆ ಪದ್ಮಾವತಿ ದೇವಿಗೆ ಲಕ್ಷ ಹೂವಿನ ಪೂಜೆ, ಭ.1008 ಶ್ರೀ ಆದಿನಾಥ ತೀರ್ಥಂಕರರಿಗೆ 54 ಕಲಶ ಅಭಿಷೇಕ, ಮಹಾ ಪೂಜೆ.
ದಿನಾಂಕ 26.05.2019 ಭಾನುವಾರ ಅಷ್ಟ ದಿಕ್ಷು ಧಾಮಸಂಪ್ರೋಕ್ಷಣೆ, ನಯನೋನ್ಮಿಲನ, ಮುಖ ವಸ್ತ್ರ ಉದ್ಘಾಟನೆ, ಸಾಮೂಹಿಕ ಭಕ್ತಾಮರ ಆರಾಧನೆ, ಮಹಾಪೂಜೆ, ಧಾರ್ಮಿಕ ಸಭೆ, 108 ಕಲಶ ಅಭಿಷೇಕ,ಮಹಾ ಪೂಜೆ, ಪ್ರಸಾದ ವಿತರಣೆ.
ಬಂಟ್ವಾಳ ಜೈನ್ ಮಿಲನ್ ನ ಆಶ್ರಯದಲ್ಲಿ ದಿನಾಂಕ 26.05.2019 ಭಾನುವಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭಾನ್ವಿತ ಜೈನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಪರಮ ಪೂಜ್ಯ ಸ್ವಸ್ತಿಶ್ರೀ ಭಾರತ ಭೂಷಣ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಶ್ರೀ ಜೈನ ಮಠ ಮೂಡುಬಿದಿರೆ ಮತ್ತು ಮಾತೃಶ್ರೀ ಡಿ.ಹೇಮಾವತಿ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here