ಬಂಟ್ವಾಳ: ದ.ಕ ಜಿಲ್ಲೆಯಲ್ಲಿ ನೀರಿನ ಅಭಾವ ತಲೆದೂರಲು ರಾಜ್ಯ ಸರಕಾರ ಅವೈಜ್ಞಾನಿಕ ನೀತಿಗಳೇ ಕಾರಣ. ನದಿಯ ಉಗಮಸ್ಥಾನದಿಂದ ಜಿಲ್ಲಾದ್ಯಾದಂತ 6 ಅಣೆಕಟ್ಟುಗಳಿದ್ದು ಅವುಗಳಲ್ಲಿ ಹೂಳು ತುಂಬಿದ್ದು ಸರಕಾರ ಹೂಳು ಎತ್ತಲು ಕ್ರಮ ಕೈಗೊಳ್ಳದಿರುವುದರಿಂದ ಕೃತಕ ನೀರಿನ ಅಭಾವ ಉಂಟು ಆಗಲು ಕಾರಣ ಸರಕಾರ ಎಚ್ಚೆತ್ತು ತಕ್ಷಣ ಹೂಳು ಎತ್ತಲು ಕ್ರಮ ಕೈಗೊಳ್ಳಬೇಕು ಇದೇ ಪರಿಸ್ಥಿತಿ ಮುಂದುವರಿದ್ದಾರೆ ಜಿಲ್ಲೆಯಲ್ಲಿ ಭೀಕರ ಜಲಕ್ಷಾಮ ಉಂಟು ಆಗಲಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ತುಂಗಪ್ಪ ಬಂಗೇರ ಅಭಿಪ್ರಾಯ ಪಟ್ಟಿದ್ದಾರೆ.


