ಬಂಟ್ವಾಳ: ತಾಲೂಕಿನ ಬಹುತೇಕ ಗ್ರಾ.ಪಂ.ಗಳು ಅಭಿವೃದ್ದಿಯಲ್ಲಿ ಹಿಂದೆ ಉಳಿದಿದೆ, ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ| ಸೆಲ್ವಮಣಿ ಅಸಮಾಧಾನ ವ್ಯಕ್ತಪಡಿಸಿದರು.

ಬಂಟ್ವಾಳ ತಾಲೂಕಿನ ಪಿಡಿಒ ಗಳ ತಾಲೂಕಿನ‌ ವಿವಿಧ ಇಲಾಖಾ ಅಧಿಕಾರಿಗಳ ಅಭಿವೃದ್ಧಿ ಪ್ರಗತಿ ಪರಿಶೀಲನೆ ಸಭೆ ತಾಲೂಕು ಪಂಚಾಯತ್ ನ ಎಸ್. ಜಿ.ಎಸ್.ವೈ ಸಭಾಂಗಣ ದಲ್ಲಿ ಬುಧವಾರ ಮಧ್ಯಾಹ್ನ ನಡೆಯಿತು.
ಈ ಸಭೆಯಲ್ಲಿ ಸಿ.ಒ.ಡಾ| ಸೆಲ್ವಮಣಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಗ್ರಾ.ಪಂ.ಗಳಿಗೆ ನೀಡಿದ ವಾರ್ಷಿಕ ಶೇ.ವಾರು ಗುರಿಯನ್ನು ತಲುಪದೆ ಇರುವ ಬಗ್ಗೆ ಸಿ.ಒ.ಅವರು ಗರಂ ಅದರಲ್ಲದೆ ಬಂಟ್ವಾಳ ತಾ.ಪಂ.ಕಾರ್ಯನಿರ್ವಾಣಾಧಿಕಾರಿ ರಾಜಣ್ಣ ಅವರ ಮೇಲೆ ಕ್ರಮಕೈಗೊಳ್ಳವ ಬಗ್ಗೆ ಎಚ್ಚರಿಕೆ ನೀಡಿದರು.
ಮೇ.ತಿಂಗಳ ಅಂತ್ಯದ ವೆರಗೂ ಕಾಮಗಾರಿ ಪೂರ್ಣಗೊಳಿಸದೆ ಮಳೆ ಬರುವ ಜೂನ್ ತಿಂಗಳಲ್ಲಿ ಕಾಮಗಾರಿ ಹೇಗೆ ಪೂರ್ಣಗೊಳಿಸುತ್ತೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಎಲ್ಲಾ ಗ್ರಾಮ ವ್ಯಾಪ್ತಿಯ ಲ್ಲಿ ಬಹುತೇಕ ಕಾಮಗಾರಿಗಳ ಪೈಕಿ ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದ ಕಾಮಾಗಾರಿಗಳು ಮಾತ್ರ ಬಾಕಿ ಉಳಿದಿರುವುದು ಮೇಲ್ನೋಟಕ್ಕೆ ಗಮನಕ್ಕೆ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾ.ಪಂ.ಪಿಡಿಒಗಳು ತಾಂತ್ರಿಕ ಸಮಸ್ಯೆ ಯ ಬಗ್ಗೆ ದೂರು ಮುಂದಿಟ್ಟಾಗ , ದ.ಕ.ಜಿಲ್ಲೆ ಯ ಪ್ರತಿ ಗ್ರಾ.ಪಂ. ತಂತ್ರಜ್ಞಾನ ದಲ್ಲಿ ಮುಂದುವರಿದಿದ್ದು ನೀವೂ ಅಭಿವೃದ್ಧಿ ಕಾರ್ಯದಲ್ಲಿ ಹಿಂದುಳಿದರೆ, ಉತ್ತರಕನ್ನಡ ಜಿಲ್ಲೆಯಲ್ಲಿ ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಅವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಉಪಕಾರ್ಯದರ್ಶಿ ಮಹೇಶ್, ನೆರವು ಘಟಕದ ಸಂಚಾಲಕಿ ಮಂಜುಳಾ, ತಾ.ಪಂ.ಕಾರ್ಯನಿರ್ವಾಣಾಧಿಕಾರಿ ರಾಜಣ್ಣ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here