Monday, September 25, 2023
More

    ರಾಷ್ಟ್ರೀಯ ಹೆದ್ದಾರಿ ಯ ಬದಿಯಲ್ಲಿ ಕೊಳೆತು ನಾರುತ್ತಿದೆ ತ್ಯಾಜ್ಯ: ನಿರ್ವಹಣೆ ಮಾಡದ ಇಲಾಖೆ

    Must read

    ಬಂಟ್ವಾಳ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಪಾಣೆಮಂಗಳೂರು ಸೇತುವೆ ಯ ಬಳಿಯಲ್ಲಿ ರಾಶಿ ರಾಶಿ ಕಸ ತ್ಯಾಜ್ಯ ಗಳು ತುಂಬಿಕೊಂಡು ದುರ್ವಾಸನೆ ಬೀರುತ್ತಿದೆ.
    ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿ ದಿಬ್ಬದ ರೀತಿಯಲ್ಲಿ ಕಸ, ತ್ಯಾಜ್ಯ ರಾಶಿಯಾಗಿದ್ದು ಇದನ್ನು ವಿಲೇವಾರಿ ಮಾಡುತ್ತಿಲ್ಲ.
    ಅನೇಕ ದಿನಗಳಿಂದ ತ್ಯಾಜ್ಯ ಕೊಳೆತು ನಾರುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಚಲಿಸುವ ಪ್ರಯಾಣಿಕರಿಗಂತೂ ದುರ್ನಾತದಿಂದ ಅನುಭವ.
    ಬಿ.ಸಿ.ರೋಡಿನಿಂದ ಮೆಲ್ಕಾರ್ ಕಡೆಗೆ ಹೋಗುವ ವೇಳೆ ಪಾಣೆಮಂಗಳೂರು ಹೊಸ ಸೇತುವೆ ದಾಟಿದ ಕೂಡಲೇ ರಸ್ತೆಯ ಎರಡು ಇಕ್ಕೆಲಗಳಲ್ಲಿ ಹಾಳೆ ಬಟ್ಟಲು, ಕೊಳೆತ ತ್ಯಾಜ್ಯ, ಪ್ಲಾಸ್ಟಿಕ್, ಹೀಗೆ ಇಲ್ಲಿ ಏನುಂಟು ಏನಿಲ್ಲ ಎಂದು ಹೇಳಲು ಅಸಾಧ್ಯ.
    ಆದರೆ ರಾಶಿ ಹಾಕಿದ ಕಸವನ್ನು ವಿಲೇವಾರಿ ಮಾಡಲು ಸಂಬಂಧಿಸಿದ ಇಲಾಖೆ ಮುಂದಾಗುತ್ತಿಲ್ಲ.

     

    ಕಾರಣ ಇಷ್ಟೇ ಈ ಭಾಗ ಯಾರಿಗೆ ಸೇರಿದ್ದು:
    ಕಸ ಹಾಕುತ್ತಿರುವ ಪ್ರದೇಶ ಬಂಟ್ವಾಳ ‌ಪುರಸಭೆ ಮತ್ತು ನರಿಕೊಂಬು ಗ್ರಾಮ ಪಂಚಾಯತ್ ನ ಮಧ್ಯ ಭಾಗವಾಗಿರುವುದರಿಂದ ಇಲ್ಲಿ ಗಡಿ ವಿವಾದ ಉಂಟಾಗಿದೆ. ಪುರಸಭೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೈ ಜಾರಿಸಿದರೆ, ಇತ್ತ ನರಿಕೊಂಬು ಗ್ರಾಮ ಪಂಚಾಯತ್ ಇದು ನಮ್ಮ ದಲ್ಲ ಪುರಸಭೆಯದ್ಧು ಹೇಳಿ ಸುಮ್ಮನೆ ಕುಳಿತು ಕೊಂಡಿದೆ.‌ ಇವರಿಬ್ಬರ ಕೊಳಿ ಜಗಳದಿಂದ ಇಕ್ಕಟ್ಟಿಗೆ ಸಿಲುಕಿದ್ದು ರಾಶಿಯಾದ ತ್ಯಾಜ್ಯ.
    ರಾಷ್ಟ್ರೀಯ ಹೆದ್ದಾರಿ ಅಗಿರುವುದರಿಂದ ಈ ಭಾಗದಲ್ಲಿ ಕಸವನ್ನು ಬೇಕಾಬಿಟ್ಟಿ ಎಸೆದು ಹೋಗುವುದು ತಪ್ಪು ಅಂತ ಕಸ ಎಸೆಯುವವರಿಗೆ ಯಾಕೆ ಮನವರಿಕೆ ಅಗುತ್ತಿಲ್ಲ ಎಂಬುದು ಕೂಡಾ ಇಲ್ಲಿ ಅತ್ಯಂತ ಪ್ರಮುಖ ಪ್ರಶ್ನೆಯಾಗಿದೆ.
    ಸ್ವಚ್ಛ ತೆಯ ಬಗ್ಗೆ ಸಾಕಷ್ಟು ಕಾರ್ಯಕ್ರಮ ಗಳ ಮೂಲಕ ಅರಿವು ಮೂಡಿಸಿದ್ದರೂ ಪದೆ ಪದೇ ರಸ್ತೆಯಲ್ಲಿ ಕಸ ಎಸೆಯುವುದು ಸರಿಯಾ ಎಂಬ ಪ್ರಶ್ನೆ ಮಾಡಬೇಕಾಗಿದೆ.
    ಪರಿಸರ ಸಂರಕ್ಷಣೆ ಮತ್ತು ಆರೋಗ್ಯ ಕಾಪಾಡುವಲ್ಲಿ ಸರಕಾರ ಇಲಾಖೆ ಜೊತೆಗೆ ಸಾರ್ವಜನಿಕರ ಪಾತ್ರ ಕೂಡಾ ಹಿರಿದಾಗಿದೆ.
    ಸ್ವಚ್ಚತೆಯ ಪ್ರಶ್ನೆ ಬಂದಾಗ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ.
    ಮಳೆಗಾಲ ಆರಂಭವಾಗುವ ಸಂಧರ್ಭದಲ್ಲಿ ಈ ರೀತಿಯಲ್ಲಿ ಕಸ ಬೀಸಾಡುವುದು ಸರಿಯಲ್ಲ, ಮಳೆ ನೀರಿಗೆ ಕೊಳೆತು ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಗಳು ಇವೆ.ಹಾಗಾಗಿ ಕಸ ಎಸೆಯುವ ಸಾರ್ವಜನಿಕ ರು ಎಚ್ಚರವಹಿಸಬೇಕು ಮತ್ತು ಪುರಸಭಾ ವ್ಯಾಪ್ತಿಯಲ್ಲಿ ರಾಶಿ ಬಿದ್ದಿರುವ ಕಸಗಳನ್ನು ದಿನೇ ದಿನೇ ವಿಲೇವಾರಿ ಮಾಡುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂಬುದೇ ಜನ ಆಗ್ರಹ. ನೀತಿ ಸಂಹಿತೆ ನೆಪದಲ್ಲಿ ಜನಪ್ರತಿನಿಧಿಗಳು ಮೌನವಾಗಿದ್ದಾರೆ.
    ಅದೇ ವರದಾನವಾಗಿ ಸ್ವೀಕಾರ ಮಾಡಿದ ಅಧಿಕಾರಿ ವರ್ಗ ಯಾವುದೇ ಕೆಲಸಗಳನ್ನು ಮಾಡದೆ ಕೊಠಡಿಯಲ್ಲಿ ನಿದ್ದೆ ಮಾಡುತ್ತಿದ್ದಾರೆ.
    ನೀತಿ ಸಂಹಿತೆ ಯಿಂದ ಅಧಿಕಾರಿ ವರ್ಗದವರನ್ನು ಹೇಳುವವರಿಲ್ಲ ಕೇಳುವವರಿಲ್ಲ ಎಂಬಂತೆ ಆಗಿದೆ..

    More articles

    LEAVE A REPLY

    Please enter your comment!
    Please enter your name here

    Latest article