ಬಂಟ್ವಾಳ:  ದ.ಕ ಜಿಲ್ಲೆಯಲ್ಲಿ ತೀವ್ರವಾಗಿ ಅಂತರ್ಜಲ ಮಟ್ಟ ಕುಸಿಯಲು ಭತ್ತದ ಬೇಸಾಯ ಅವನತಿಯತ್ತ ಸಾಗುತ್ತಿರುವುದೇ ಕಾರಣವಾಗಿದೆ. ಭತ್ತದ ಕೃಷಿಯ ಈಗಿನ ಸ್ಥಿತಿಗೆ ಸರಕಾರದ ತಪ್ಪು ನಿರ್ಧಾರಗಳೇ ಕಾರಣವಾಗುತ್ತಿದೆ. ಹೊಟ್ಟೆಗೆ ಅನ್ನ ನೀಡುವ ಭತ್ತದ ಕೃಷಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುವ ಕಾಯಕವಾಗಿದೆ.ಆದ್ದರಿಂದ ಭತ್ತದ ಕೃಷಿಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಮಾಡಿಕೊಡಬೇಕು ಎಂದು ಬೆಳ್ತಂಗಡಿ ಮಿತ್ತಬಾಗಿಲು ಸಾವಯವ ಭತ್ತದ ಕೃಷಿಯ ಹಾಗೂ ಭತ್ತದ ತಳಿ ಸಂರಕ್ಷಕರಾದ ಬಿ.ಕೆ.ಪರಮೇಶ್ವರ ರಾವ್ ಹೇಳಿದರು.
ಅವರು ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಭತ್ತದ ಬೇಸಾಯ ವಿಚಾರ ಸಂಕೀರ್ಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟ ಬಂಟ್ವಾಳ, ದಿಶಾ ಟ್ರಸ್ಟ್(ರಿ) ಕೈಕಂಬ ಇವರ ಜಂಟಿ ಆಶ್ರಯದಲ್ಲಿ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಅಭಿಯಾನ ಅಂಗವಾಗಿ ನಡೆದ ಕಾರ್‍ಯಾಗಾರದ ಉದ್ಘಾಟಣೆಯನ್ನು ನೇತ್ರಾವತಿ ಒಕ್ಕೂಟದ ಅದ್ಯಕ್ಷರಾದ ಶ್ರೀ. ಹರ್ಷೇಂದ್ರ ಹೆಗ್ಡೆ ಅಂತರಗುತ್ತು ಕೊಲ ಇವರು ಮಾಡಿದರು. ದಿಶಾ ಟ್ರಸ್ಟ್ ನಿರ್ದೇಶಕರಾದ ಸಿಲ್ವೆಸ್ಟರ್ ಡಿಸೋಜ ಸಭಾಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರ್ಣದಲ್ಲಿ ದಿಶಾ ಸಂಸ್ಥೆಯ ಸಂಯೋಜಕರಾದ ಹೆನ್ರಿ ವಾಲ್ಡರ್ , ಭತ್ತದ ಕೃಷಿಕರಾದ ಶ್ರೀ.ಸುದರ್ಶನ ಶೆಟ್ಟಿ ಬಡಕಬೈಲು ,ಶ್ರೀ .ವಿಷ್ಣುಮೂರ್ತಿ ಭಟ್ ಪಲ್ಲಿಪಾಡಿ, ಶ್ರೀ. ಹಷೇಂದ್ರ ಹೆಗ್ಡೆ ಕೊಲ ತಮ್ಮ ವಿಚಾರ ಮಾಡಿಸಿದರು. ದಿಶಾ ಸಂಸ್ಥೆಯ ಕ್ಷೇತ್ರ ಸಂಯೋಕರಾದ ರುದೇಶ್ ಪ್ರಸ್ನಾವನೆಗೈದರು. ಕ್ಷೇತ್ರ ಮೇಲ್ವಿಚಾರಕಿ ಶ್ರೀಮತಿ. ಪ್ರಭಾವತಿ ಕಾರ್‍ಯಕ್ರಮ ನಿರೂಪಿಸಿ. ಕ್ಷೇತ್ರ ಮೇಲ್ವಿಚಾರಕಿ ವಿನೋದ ಸ್ವಾಗತಿಸಿ, ಕ್ಷೇತ್ರ ಮೇಲ್ವಿಚಾರಕಿ ರಂಜಿನಿ ಧನ್ಯವಾದ ನೀಡಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here