ಬಂಟ್ವಾಳ : ಮೋದಿ ಅಭಿಮಾನಿಗಳು ಬೇರೆ ಬೇರೆ ವೇಷಭೂಷಣ ದಲ್ಲಿ ದೇಶದ ಎಲ್ಲೆಡೆ ಇರುವುದು ಮಾಮೂಲಿ ಆದರೆ
ಇಲ್ಲೊಬ್ಬರು ಮೋದಿ ಅಭಿಮಾನಿ ಮಾತ್ರ ಕಳೆದ ಒಂದು ವರ್ಷದಿಂದ ತನ್ನ ಗಡ್ಡ ಮತ್ತು ತಲೆಯ ಕೂದಲಿಗೆ ಕತ್ತರಿ ಹಾಕದೆ ಮೋದಿ ಪ್ರಧಾನಿಯಾಗಬೇಕು ಎಂದು ಕಾದವರು.

ದ ಕ ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಬಂಟ್ವಾಳದ ಕೋಶಾಧಿಕಾರಿ ಬಾಲಾಜಿ ಸರ್ವಿಸ್ ಸ್ಟೇಷನಿನ ಮಾಲಕ ಹಾಗೂ ಜನರ ಸೇವಕ. ನೇರ , ದಿಟ್ಟ , ನಿರಂತರ , ಇವರೇ *ಪ್ರಶಾಂತ್* *ಭಂಡಾರ್ಕಾರ್* ಮೋದಿಯ ಆಡಳಿತಕ್ಕೆ ಮನಸೋತವರು , ಮೋದಿಯ ಅಭಿಮಾನವನ್ನು ಅಲೆಯಾಗಿ ಪರಿವರ್ತಿಸಿದವರು .
ಕಳೆದ ಒಂದು ವರುಷದಿಂದ ತನ್ನ *ಗಡ್ಡ* *ಕೂದಲಿಗೆ* ಕತ್ತರಿ ಹಾಕದೆ *ಮೋದಿಜಿ* ಪ್ರಮಾಣ ವಚನದಂದೇ ಇದಕ್ಕೆ ಮುಕ್ತಿ ಎಂದು ಪ್ರತಿಜ್ಞೆ ಮಾಡಿದವರು. ರಾಷ್ಟ್ರೀಯ ಚಿಂತನೆ ಇವರಲ್ಲಿ ಸದಾ ಹೊರ ಹೊಮ್ಮುತ್ತಿರುತ್ತದೆ ದೇಶದ ಬಗ್ಗೆ ನಕಾರಾತ್ಮಕ ಮಾತಾಡಿದಲ್ಲಿ ಯಾವುದೇ ಮುಲಾಜಿಲ್ಲದೆ ಉಗಿದು ಬಿಡುತ್ತಾರೆ. ಬಂಟ್ವಾಳದ ಜನತೆಯ ಪ್ರೀತಿ ವಿಶ್ವಾಸ ಗಳಿಸಿರುವ *ಪ್ರಶಾಂತಣ್ಣ* ಹಲವಾರು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಮೇ 30 ರಂದು ಬಂಟ್ವಾಳ ದ ವಾಸು ಭಂಡಾರಿಯ ಸೆಲೂನ್ ನಲ್ಲಿ ತನ್ನ *ಕೂದಲು* *ಗಡ್ಡ* ಕ್ಕೆ ಮುಕ್ತಿ ನೀಡಲಿದ್ದಾರೆ. ಮೋದಿಜಿ* ಪ್ರಮಾಣ ವಚನದ ನಂತರ ಪ್ರಶಾಂತಣ್ಣ ಹೊಸ ಲುಕ್ ನಲ್ಲಿ ಕಾಣಿಸಿ ಕೊಳ್ಳಲಿದ್ದಾರೆ..