ಈ ಕಾಲಘಟ್ಟದಲ್ಲಿ *ದೇವರೆಂಬುದು* ಬಲು ಚರ್ಚಿತ ವಿಷಯ, ಆಸ್ತಿಕರ ದೃಷ್ಟಿಯಲ್ಲಿ ದೇವರಿದ್ದಾರೆಂದರೆ ನಾಸ್ತಿಕರು ಎಲ್ಲಿದ್ದಾರೆ ಆ ದೇವರು ಎನ್ನುವರು, ಇನ್ನು ಆಸ್ತಿಕನೂ ಆಗದೆ ನಾಸ್ತಿಕನೂ ಆಗದೆ ಮಧ್ಯದಲ್ಲಿ ಇದ್ದಾನೋ ಅಥವಾ ಇಲ್ಲವೋ ಎಂಬ ಸಂಶಯದಡಿಯಲ್ಲಿಯೇ ಬದುಕುವವ ನಾವುಗಳೇ ಬಹಳ ಜಾಸ್ತಿ, ಈ ಸಂಶಯದ ನಡೆಯವರು ಭಕ್ತಿಗಿಂತ ಹೆಚ್ಚಾಗಿ ಭಯದಿಂದಲೇ ದೇವರ ಮೊರೆ ಹೋಗುವ ಅಪ್ಪಟ ಸತ್ಯವಂತೂ ಹೌದು, ಭಗವಂತ ಸರ್ವ ವ್ಯಾಪಿಯಾಗಿರುವವನು, ಇವನೇ ವಿಶ್ವಕ್ಕೆ ಮೊದಲಿಗನು, ಜಗದ ನಿರ್ಮಿತಿಗೆ ಕಾರಣಕರ್ತನಾದವನೂ ಹೌದು, ತಾನೆ ರಚಿಸಿಕೊಂಡ ಮಾಯಾಲೋಕದಲ್ಲಿ ಮಾಯಾಲೋಲನಾದವನು, ಎಲ್ಲರಿಗೂ ಎಲ್ಲಕ್ಕೂ ಒಡೆಯನಾದವನವನು, ಯಾವ ಒಂದು ಅದ್ಬುತ ಶಕ್ತಿಯನ್ನು ಯಾವೊಬ್ಬರೂ ಕಾಣದಿದ್ದರೂ ಆ ಅದ್ಬುತ ಶಕ್ತಿ ಇದೆಯೆಂದು ಅದನ್ನೇ ಜಗಶ್ಯಕ್ತಿ ಎಂದು ನಂಬಿರುವವರೋ ಆ ಒಂದು ನಂಬಿಕೆಯ ಶಕ್ತೀಯೇ ಒಂದು ಆಶ್ಚರ್ಯಕರವಾಗಿರುವವುದು, ಆ ದೈವ ಎಂಬ ಶಕ್ತಿಯು ಒಬ್ಬೊಬ್ಬರಿಗೆ ಒಂದೊಂದು ರೀತಿ ಕಂಡು ಬರುತ್ತಿರುವ ಆ ವಿಚಿತ್ರ ಶಕ್ತಿಯೇ ದೇವರೆಂದರೆ ಅಚ್ಚರಿಯೇ ಇಲ್ಲ,,,, ಹೌದಲ್ಲವೇ ??

ದೇವರು ಒಬ್ಬನೇ ಅಲ್ಲವೇ ! ಎಲ್ಲಾ ಅಣುರೇಣುತೃಣಕಾಷ್ಠಗಳಲ್ಲಿ ಅವನುವರಹಸ್ಯವಾಗಿಯೇ ಅಡಗಿಕೊಂಡಿದ್ದಾನೆ, ಎಲ್ಲದರಲ್ಲಿಯೂ ಹರಡಿಕೊಂಡಿದ್ದಾನೆ, ಜೀವಿಗಳೊಂದಿಗೆ ಆತ್ಮಾನುರೂಪವಾಗಿಯೂ, ವಸ್ತುಗಳಲ್ಲಿ ಭೌತಿಕವಾಗಿಯೂ,

*ಏಕೋದೇವಃ ಸರ್ವಭೂತೇಷು ಗೂಡಃ, ಸರ್ವವ್ಯಾಪೀ ಸರ್ವಭೂತಾಂತರಾತ್ಮಾ! ಕರ್ಮಾಧ್ಯಕ್ಷಃ ಸರ್ವಭೂತಾದಿವಾಸಃ, ಸಾಕ್ಷಿ ಚೇತಾ ಕೇವಲೋ ನಿರ್ಗುಣಶ್ಚಃ !*

ಎನ್ನು ಉಪನಿಶತ್ತಿನ ಮಾತಿನಂತೆ ಆ ದೇವರು ಎಂಬ ಶಕ್ತಿ ಎಲ್ಲಾ ವಸ್ತುಗಳಲ್ಲಿ ಹರಡಿ, ಅಡಗಿ ಕುಳಿತಿದ್ದಾನೆ ಎಂಬಂತಾಗಿದೆ..

ಆ ದೇವರು ಎಂಬ ಶಕ್ತಿಯು ನಮಗೆ ಸತತವಾಗಿ ಒಳ್ಳೆಯದನ್ನೇ ಮಾಡಿದ್ದರೆ ನಮಗೆ ದೇವರು ಒಳ್ಳೆಯವನಾಗಿಯೇ ಇರುತ್ತಾನೆ, ಒಳ್ಳೆಯದೇ ಆದರೂ ನಾವು ಅವನಿಗೆ ಶರಣು ಜೋಗಿರುತ್ತೇವೆ, ಅದೇ ಕೇಡುಂಟಾದರೆ ಅದಕ್ಕೆ ಮತ್ತೋಂದು ದೇವರ ಆಕಾರಕ್ಕೆ ಮೊರೆ ಹೋಗುತ್ತೇವೆ.. ದೇವರು ಎಂಬುದು ನಮಗೆ ಸಿಗದ, ನಮಗೆ ಅರಿಯದ ಒಂದು ದೊಡ್ಡ ವಿಷಯವೇ ಹೌದು,, ಆ ಶಕ್ತಿಯು ನಮ್ಮ ಭಾವಕ್ಕೆ ಸಿಗದು, ಅಳತೆಗೂ ಸಿಗದು, ಹಾಗಾಗಿ ದೇವರು ಎಂಬ ವಸ್ತುವು ಹಿಂದೆಯೂ, ಇಂದಿಗೂ, ಮುಂದೆಯೂ ಸಹ ಮನುಜನ ಹೃದಯಕ್ಕೆ ಹತ್ತಿರ ಎಂತಾದರೂ ಕೊನೆಗೆ ಪ್ರಶ್ನೆಯಾಗಿಯೇ ಉಳಿಯುತ್ತಾನೆ…
*ಒಟ್ಟಿನಲ್ಲಿ ದೇವರು ಎಂಬುದು ಅವರವರ ಭಾವಕ್ಜೆ, ಅವರವರ ಭಕುತಿಗೆ ಬಿಟ್ಟು ಬಿಡಬೇಕು, ದೇವರಿದ್ದಾನೋ, ಇಲ್ಲವೋ ಎನ್ನುವುದು ಚರ್ಚಿತ ವಿಷಯವಾದರೂ ಅವರವರ ಮನಸ್ಸಿಗೆ ಸಮಾಧಾನ, ನೆಮ್ಮದಿ ತರುವಂತಿದ್ದರೆ ಅವರವರ ಭಾವಕ್ಕೆ ಬಿಡುವುದು ಸೂಕ್ತ*

 

✍ *ರವೀ ಚಿನಾ ಹಳ್ಳಿ*

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here