


ಬಂಟ್ವಾಳ: ಟಿಪ್ಪರ್ ಲಾರಿ ಮತ್ತು ಬುಲೆಟ್ ಬೈಕ್ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಅಣ್ಣಳಿಕೆ-ಹಿರ್ಣಿ ರಸ್ತೆ ನಡುವಿನ ಕುಮೇರ್ ಎಂಬಲ್ಲಿ ಬುಧವಾರ ಸಂಭವಿಸಿದೆ.
ಮೃತರನ್ನು ಸಿದ್ಧಕಟ್ಟೆಯ ಹಿರ್ಣಿ ನಿವಾಸಿ ರಮೇಶ್ ಪೂಜಾರಿ ಎಂಬವರ ಪುತ್ರ, ಬೈಕ್ ಸವಾರ ಸುರೇಂದ್ರ (33), ಸಹ ಸವಾರಿ, ಮೃತರ ಸಂಬಂಧಿ ಜಯಲಕ್ಷ್ಮೀ (36) ಎಂದು ಗುರುತಿಸಲಾಗಿದೆ.


ಘಟನೆ ವಿವರ :
ಇವರಿಬ್ಬರು ಬೈಕ್ನಲ್ಲಿ ಕೊಡಿಯಾಲ್ಬೈಲ್ಗೆ ತೆರಳುತ್ತಿದ್ದಾಗ ಕರ್ಪೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿಯು ಅಣ್ಣಳಿಕೆ-ಹಿರ್ಣಿ ಒಳರಸ್ತೆಯ ಕುಮೇರ್ ಎಂಬಲ್ಲಿ ಢಿಕ್ಕಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಇವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯ ಮಧ್ಯೆ ಕೊನೆಯುಸಿರೆಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಟ್ವಾಳ ಟ್ರಾಫಿಕ್ ಎಸ್ಸೈ ಮಂಜುನಾಥ್, ಎಎಸ್ಸೈ ಎಂ.ಕೆ.ಕುಟ್ಟಿ, ಸಿಬ್ಬಂದಿಸೋಮನಾಥ, ಮನೋಹರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


