


ಬಂಟ್ವಾಳ: ಬಂಟ್ವಾಳದ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ ೯ನೇ ತರಗತಿಯ ವಿದ್ಯಾರ್ಥಿಗಳು ಮತದಾನದ ಕುರಿತು ಸಾರ್ವಜನಿಕ ಅರಿವು ಮತ್ತು ಜಾಗೃತಿ ಮೂಡಿಸಲು ರ್‍ಯಾಲಿಯನ್ನು ಕೈಗೊಂಡಿದ್ದರು. ರ್‍ಯಾಲಿಯು ಶಾಲೆಯಿಂದ ಹೊರಟು ಬಂಟ್ವಾಳ ಪೇಟೆಯ ತನಕ ಸಾಗಿತು. ರ್‍ಯಾಲಿಯಲ್ಲಿ ವಿದ್ಯಾರ್ಥಿಗಳು ಮತದಾನದ ಪ್ರಾಮುಖ್ಯತೆಯ ಬಗೆಗಿನ ಘೋಷಣಾ ವಾಕ್ಯಗಳನ್ನು ಪ್ರದರ್ಶಿಸಿದರು.


