


ವಿಟ್ಲ: ವಿಸ್ಡಂ ವೇವ್ ಅಕಾಡೆಮಿ, ’ವ್ವಾ’ ಆಯೋಜಿಸಿದ ’ನ್ಯೂಬೀ ಫ್ರೀ ಸ್ಕೂಲ್ ಚಿಣ್ಣರೋತ್ಸವ ’ ಕಾರ್ಯಕ್ರಮವು ಪುಟಾಣಿಗಳ ವೈವಿಧ್ಯಮಯ ಧಾರ್ಮಿಕ, ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ಅಬ್ದುಸ್ಸಲಾಂ ಲತೀಫಿ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು ಆಧುನಿಕತೆಯ ಜಂಜಾಟದಲ್ಲಿ ಮಕ್ಕಳಿಗೆ ನೀಡುವ ಶಿಕ್ಷಣದಲ್ಲಿ ಹೆತ್ತವರು ಎಡವಿದರೆ ಅದನ್ನು ಕಣ್ಣೀರಿನೊಂದಿಗೆ ಅನುಭವಿಸಬೇಕಾಗಬಹುದು. ಉತ್ತಮ ಪೀಳಿಗೆಗಾಗಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಲು ನ್ಯೂಬಿಯಂತಹ ಶಾಲೆಗಳು ಪೂರಕ ವಾತಾವರಣವನ್ನು ಒದಗಿಸುತ್ತದೆ ಎಂದರು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ’ವ್ವಾ’ ಸಂಸ್ಥೆಯ ನಿರ್ದೇಶಕ ಎಂ. ಯಾಸೀನ್ ಸಅದಿ, ಎಳೆ ಮನಸ್ಸುಗಳು ಧಾರ್ಮಿಕತೆಯಲ್ಲೇ ಭದ್ರವಾಗಲು ಅನುಕೂಲವಾಗುವ ರೀತಿಯಲ್ಲಿ ಅತೀ ವಿನೂತನವಾದ ಶೈಲಿಯಲ್ಲಿ ಈ ಶಾಲೆ ಗಮನಾರ್ಹ ಸೇವೆ ಸಲ್ಲಿಸುತ್ತಾ ಸಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಅಬೂಬಕರ್ ಅನಿಲಕಟ್ಟೆ ಮಾತನಾಡಿ ತಾಯಿಯ ವಾತ್ಸಲ್ಯ ದೊಂದಿಗೆ ಸಣ್ಣ ಮಕ್ಕಳಿಗೆ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿರುವ ನ್ಯೂಬಿ ಶಾಲೆಯ ಪ್ರಯತ್ನ ಶ್ಲಾಘನೀಯ ಎಂದರು. ಅಬ್ದುಲ್ ಖಾದರ್ ಮುಸ್ಲಿಯಾರ್ ಅಳಕೆಮಜಲ್ ದುವಾ ನೆರವೇರಿಸಿದರು.
ವೇದಿಕೆಯಲ್ಲಿ ಡಿವಿಷನ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಶರಫೀ , ಮೂಡಂಬೈಲ್ ಉಸ್ಮಾನ್ ರಾಧುಕಟ್ಟೆ, ಅಬ್ದುಲ್ ರಹೀಂ ಸಖಾಫಿ ಅಲಾದಿ, ಸಿದ್ದೀಕ್ ಸೇರಾಜೆ ಉಪಸ್ಥಿತರಿದ್ದರು.
’ವ್ವಾ’ ಸಂಸ್ಥೆಯ ನಿರ್ದೇಶಕ ಅಬ್ದುರ್ರಹ್ಮಾನ್ ಸ ಅದಿ ಕೊಡಿಪ್ಪಾಡಿ ಸ್ವಾಗತಿಸಿದರು. ಸಂಚಾಲಕ ಹೈದರ್ ಅಳಕೆಮಜಲ್ ವಂದಿಸಿದರು. ಅಬ್ದುಸ್ಸಲಾಂ ಮದನಿ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.


