Wednesday, October 18, 2023

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ಮತದಾನ

Must read

ಉಜಿರೆ: ಲೋಕಸಭಾ ಚುನಾವಣೆಯೊಂದಿಗೆ ಉತ್ತಮ ಸರ್ಕಾರ ರಚನೆಯಾಗಿ ದೇಶದ ಭವಿಷ್ಯ ಉಜ್ವಲವಾಗಲಿ. ಬಡಜನರು, ಕೃಷಿಕರು, ಕಾರ್ಮಿಕರು ಹಾಗೂ ಜನಸಾಮಾನ್ಯರ ರಕ್ಷಣೆಯೊಂದಿಗೆ ಎಲ್ಲಾ ಪ್ರಜೆಗಳಿಗೆ ಸರ್ಕಾರ ರಕ್ಷಣೆಯೊಂದಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದು ಹಾರೈಸಿ ನಾವು ಇಂದು ಮತದಾನ ಮಾಡಿದ್ದೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಧರ್ಮಸ್ಥಳದಲ್ಲಿ ಗುರುವಾರ ಅವರು ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 168ನೆ ಮತದಾನ ಕೇಂದ್ರದಲ್ಲಿ ಅವರು ಸರದಿ ಸಾಲಿನಲ್ಲಿ ಹೋಗಿ ಮತದಾನ ಮಾಡಿ ಹೊರಗೆ ಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರ ಉತ್ತಮ ಯೋಜನೆ ರೂಪಿಸಿ ಕಾರ್ಯ ನಿರ್ವಹಿಸಲಿ ಎಂದು ಅವರು ಹಾರೈಸಿದರು.
ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ , ಡಿ. ಶ್ರೇಯಸ್ ಕುಮಾರ್ ಮತ್ತು ಡಿ. ನಿಶ್ಚಲ್ ಕುಮಾರ್ ಕೂಡಾ ಸರದಿ ಸಾಲಿನಲ್ಲಿ ಹೋಗಿ ಮತದಾನ ಮಾಡಿದರು.

More articles

Latest article