Thursday, April 11, 2024

ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ 4 ಅಶಕ್ತ ಫಲಾನುಭವಿಗಳಿಗೆ ಧನ ಸಹಾಯ ಹಸ್ತಾಂತರ

ಬಂಟ್ವಾಳ: ಟ್ರಸ್ಟ್ ನಿಂದ ಸಹಾಯ ಮಾಡಲು ಸೇವಾ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ *ಕ್ಯಾನ್ಸರ್* ಖಾಯಿಲೆಯಿಂದ ಬಳಲುತ್ತಿದ್ದ *ಕಾರ್ಕಳ ತಾಲೂಕು ವಂಜರಕಟ್ಟೆ ದಾಸಂದಕಲ್ಲು ಬೋಳ ಹರೀಶ್ ಆಚಾರ್ಯ ಮತ್ತು ಆಶಾ ದಂಪತಿಗಳ ಪುತ್ರ ಗಗನ್* ರವರ ಚಿಕಿತ್ಸೆಗೆಂದು ನೀಡಬೇಕಾದ ರೂ. 20,000 ಚೆಕ್ ಅನ್ನು ಗಗನ್ ನ ಹೆತ್ತವರಿಗೆ, *ಮೆದುಳು ಮತ್ತು ನರ ದೌರ್ಬಲ್ಯ* ಸಮಸ್ಯೆಯಿಂದ ಬಳಲುತ್ತಿರುವ *ಬೆಳ್ತಂಗಡಿ ಕಕ್ಕಿಂಜೆ ದೊರ್ತಾಡಿಕೊಪ್ಪ ತೋಟತ್ತಾಡಿ ಹರೀಶ್ ಕುಲಾಲ್ ಮತ್ತು ಭವನಿ* ದಂಪತಿಗಳ ಮಕ್ಕಳಾದ *ಲಾವಣ್ಯ ಮತ್ತು ತನ್ವಿತ್* ಇವರಿಬ್ಬರ ಚಿಕಿತ್ಸೆಗೆ ರೂ.20,000 ಚೆಕ್ *ಮೆದುಳು* ಸಂಬಂಧಿತ ಖಾಯಿಲೆಯಿಂದ ತುತ್ತಾಗಿದ್ದ *ಮಂಗಳೂರು ಗಂಜಿಮಠ ಬಡಗುಳಿಪಾಡಿ ಗಾಂಧಿನಗರ ಸಂಜೀವ ಪೂಜಾರಿ ಮತ್ತು ಶೋಭಾ* ದಂಪತಿಗಳ ಮಗ *ಜಯರಾಮರವರ* ಚಿಕಿತ್ಸೆಗೆ ರೂ.20,000 ಚೆಕ್ ಹಾಗೂ *ಶ್ವಾಸಕೋಶದ ಕ್ಯಾನ್ಸರ್* ಸಮಸ್ಯೆಯಿಂದ ಬಳಲುತ್ತಿರುವ *ಬೆಳ್ತಂಗಡಿ ಗುಂಡೂರಿ ಪೆರ್ಲಾಪು ದಿವಾಂಗತ ರಾಜು ದೇವಾಡಿಗ ಮತ್ತು ವಾರಿಜ* ದಂಪತಿಗಳ ಮಗ *ಪದ್ಮಪ್ರಸಾದ್* ಇವರ ಚಿಕಿತ್ಸೆಗೆ ರೂ.20,000 ಚೆಕ್ ಧನ ಸಹಾಯ ಹಸ್ತಾಂತರ ನಮ್ಮ ಬೆದ್ರ ವಾರ ಪತ್ರಿಕೆ ಕಚೇರಿ ಮೂಡಬಿದ್ರೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮೂಡಬಿದ್ರಿ ಪ್ರೆಸ್ ಕ್ಲಬ್ ಅಧ್ಯಕ್ಷ ವೇಣುಗೋಪಾಲ್ ವಿಜಯಕರ್ನಾಟಕ ಪ್ರತಿನಿಧಿ ಸೀತಾರಾಮ ಆಚಾರ್ಯ ನಮ್ಮ ಬೆದ್ರ ಪತ್ರಿಕೆ ಸಂಪಾದಕ ಅಶ್ರಫ್ ವಾಲ್ಪಾಡಿ ಸಂಯುಕ್ತ ಕರ್ನಾಟಕ ಪ್ರತಿನಿಧಿ ಪ್ರೇಮ ಶ್ರೀ ಕಲ್ಲಬೆಟ್ಟು ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

More from the blog

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...

ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ"ದ ಅಂಗವಾಗಿ ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ...

ಲೋಕಸಭಾ ಚುನಾವಣೆಯ ಹಿನ್ನೆಲೆ : ಚಾರ್ಮಾಡಿಯ ಮೂವರು ಗಡಿಪಾರು

ಬೆಳ್ತಂಗಡಿ: ಚುನಾವಣ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಹಾಗೂ ಕೋಮು ಗಲಭೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇರುವ ಕಾರಣ ಮೂವರು ರೌಡಿಶೀಟರ್‌ಗಳನ್ನು ಧರ್ಮಸ್ಥಳ ಪೊಲೀಸರು ಗಡಿಪಾರು ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ನಿವಾಸಿಗಳಾದ...

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...