Monday, October 30, 2023

ವಿಶೇಷ ಉಪನ್ಯಾಸ ಕಾರ್ಯಕ್ರಮ

Must read

ಬಂಟ್ವಾಳ: ಜೀವನ ನಿರ್ವಹಣೆಗೆ ಪೂರಕವಾದ ಉದ್ಯೋಗವನ್ನು ಆಯ್ದುಕೊಳ್ಳುವುದು ಇಂದು ಪ್ರತಿಯೊಬ್ಬನ ಅಗತ್ಯವಾಗಿದೆ. ಈ ಉದ್ಯೋಗದ ದಿಕ್ಕುದೆಸೆಗಳು ವಿದ್ಯಾರ್ಥಿ ಜೀವನದಲ್ಲೇ ಅರಿತಿರಬೇಕು. ಮತ್ತು ಅದಕ್ಕೆ ಅಗತ್ಯವಾದ ಪೂರಕವಾದ ಮಾಹಿತಿಯನ್ನು ಪಡೆದುಕೊಳ್ಳಬೇಕು. ಇಂದು ಉದ್ಯೋಗಗಳ ಆಯ್ಕೆಯು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನಡೆಯುತ್ತದೆ ಎಂದು ಮಂಗಳೂರಿನ ಸರ್ವಜ್ಞ ಐ.ಎ.ಎಸ್ ಎಕಾಡಮಿ ಇದರ ನಿರ್ದೇಶಕರಾದ ಸುರೇಶ್ ಎಂ. ಎಸ್. ಹೇಳಿದರು.
ಅವರು ಇಂದು ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಮಾನವಿಕ ಸಂಘದ ಆಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಯಾವುದೇ ರೀತಿಯ ಪರೀಕ್ಷೆಗಳಾಗಲಿ ಅದನ್ನು ಲಘುವೆಂದು ಪರಿಗಣಿಸಬಾರದು. ಅದನ್ನು ಗಂಭಿರವಾಗಿ ಪರಿಭಾವಿಸಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಸಹಜ. ಉದ್ಯೋಗ ಗಳಿಸುವಲ್ಲಿ ಅದರಲ್ಲಿ ಪಡೆದ ಉತ್ತಮ ಅಂಕಗಳು ಅತೀ ಮುಖ್ಯ ಮಾನದಂಡವಾಗುತ್ತದೆ. ಇದಕ್ಕೆ ನಿರಂತರ ಪರಿಶ್ರಮ, ನಿರ್ದಿಷ್ಠವಾದ ಪೂರ್ವ ತಯಾರಿ ಅಗತ್ಯ ಎಂದವರು ಹೇಳಿದರು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ವಿಷಯಗಳು, ಅರ್ಹತೆ , ಕಲಿಕೆಯ ವಿಧಾನ ಇವುಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಮಾತನಾಡಿ ಉದ್ಯೋಗ ಗಳಿಸುವಲ್ಲಿ ಬೇಕಾದ ಪರೀಕ್ಷೆಗಳು, ಅದಕ್ಕೆ ಬೇಕಾದ ಮಾಹಿತಿ ಇವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಪಡೆಯಲೇಬೇಕು. ಮಾನವಿಕ ವಿಷಯಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ಅತೀ ಅಗತ್ಯವಾಗಿ ಈ ಮಾಹಿತಿ ತಿಳಿದಿರಬೇಕು ಎಂದವರು ಹೇಳಿದರು
ಮಾನವಿಕ ಸಂಘದ ಅಧ್ಯಕ್ಷೆ ಉಪನ್ಯಾಸಕಿ  ರೂಪಾ ಅತಿಥಿ ಪರಿಚಯದೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿನಿ ಸುಷ್ಮಾ ವಂದಿಸಿದರು. ವಿಜೇತ ಕಾರ್ಯಕ್ರಮ ನಿರೂಪಿಸಿದರು ವಿದ್ಯಾರ್ಥಿ ಭರತ್ ಪ್ರಾರ್ಥಿಸಿದರು. ಮಾನವಿಕ ಸಂಘದ ಕಾರ್ಯದರ್ಶಿ ಯಜ್ಞೇಶ್ವರ್ ಉಪಸ್ಥಿತರಿದ್ದರು.

More articles

Latest article