Friday, October 27, 2023

ಭವಿಷ್ಯದ ಭಾರತ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸುತ್ತಾರೆ : ಸುನಿಲ್ ಕುಮಾರ್

Must read

ಬಂಟ್ವಾಳ: ಸಮ್ಮಿಶ್ರ ಸರಕಾರದ ಹತ್ತು ತಿಂಗಳ ವೈಫಲ್ಯದ ಆಡಳಿತ ಹಾಗೂ ಕಾಂಗ್ರೇಸ್ ನವರ ಕುಟುಂಬ ರಾಜಕಾರಣದ ನಡುವೆ ಮತದಾರರು ನರೇಂದ್ರ ಮೋದಿ ಮತ್ತು ಬಿಜೆಪಿ ಯನ್ನು ಬೆಂಬಲಿಸುತ್ತಾರೆ ಎಂದು
ಬಿಜೆಪಿ ಚುನಾವಣಾ ಪ್ರಚಾರ ಉಸ್ತುವಾರಿ
ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ಬಿಸಿರೋಡಿನ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನರೇಂದ್ರ ಮೋದಿ ಕೇವಲ ವ್ಯಕ್ತಿಯಲ್ಲ, ಅದರ ಹಿಂದೆ ಕಾರ್ಯಕ್ರಮ, ಪರಿಶ್ರಮ, ಕಪ್ಪು ಚುಕ್ಕೆಯಿಲ್ಲದ ಆಡಳಿತ ಯಿದೆ, ಎದೆಗಾರಿಕೆ ಇದೆ, ವಿಚಾರದಾರೆಗಳ ಮೂಲಕ ಚುನಾವಣೆ ಎದುರಿಸುತ್ತಿದ್ದೇವೆ

ಕಾಂಗ್ರೇಸ್ ಬಿಡುಗಡೆ ಮಾಡಿದ ಪ್ರಣಾಳಿಕೆ ಪಾಕಿಸ್ತಾನದ ಜೊತೆ ಮಾತುಕತೆ ನಡೆಸಿ ಬಿಡುಗಡೆ ಮಾಡಿದ ಜಂಟಿ ಪ್ರಣಾಳಿಕೆ ಎಂದು ಆರೋಪಿಸಿದರು.
ಪರೋಕ್ಷವಾಗಿ ಪಾಕಿಸ್ತಾನವನ್ನು ಬೆಂಬಲಿಸುವ ಪ್ರಾಣಾಳಿಕೆ ಎಂದು ಕಟುವಾಗಿ ಟೀಕಿಸಿದರು.
ಪಾಕಿಸ್ತಾನದ ಕ್ಕೆ ಬೆಂಬಲ ನೀಡುವ ಕಾಂಗ್ರೇಸ್
ಯಾವ ರೀತಿಯಲ್ಲಿ ದೇಶ ಆಡಳಿತ ನಡೆಸಿಯಾರು ಎಂಬ ಆತಂಕ ಶುರುವಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ಭವಿಷ್ಯದ ಭಾರತದ ನಿರ್ಮಾಣ ದ ಉದ್ದೇಶದಿಂದ ರೈತಪರವಾಗಿರುವ ಪ್ರಣಾಳಿಕೆ ಬಿಜೆಪಿ ಬಿಡುಗಡೆ ಮಾಡಿದೆ ಎಂದರು.

1861 ಬೂತ್ ಗಳಲ್ಲಿ ಮೊದಲ ಹಂತದ ಮನೆ ಪ್ರಚಾರ ಮುಕ್ತಾಯವಾಗಿದ್ದು ನಾಳೆಯಿಂದ ಎರಡನೆ ಮನೆ ಮನೆ ಬೇಟಿ ಮಾಡಲಿದ್ದೇವೆ.
ಒಟ್ಟು ಮೂರು ಬಾರಿ ಮತದಾರರ ಬೇಟಿ ಕಾರ್ಯಕ್ರಮ ಮಾಡಲಿದ್ದೇವೆ.
ಈ ಸಂದರ್ಭದಲ್ಲಿ
ವಿಭಾಗದ ಸಹ ಪ್ರಭಾರಿ ಪ್ರತಾಪ್ ಸಿಂಹ, ಶಾಸಕ ರಾಜೇಶ್ ನಾಯಕ್, ಕ್ಷೇತ್ರ ಸಮಿತಿ ಅದ್ಯಕ್ಷ ದೇವದಾಸ್ ಶೆಟ್ಟಿ, ಪ್ರಮುಖರಾದ ಗೋಪಾಲಕೃಷ್ಣ ಹೇರಳೆ, ಅಪ್ಪೆ ಮಣಿಯಾಣಿ ಪುತ್ತೂರು, ರಾಮ್ ದಾಸ್ ಬಂಟ್ವಾಳ, ಜಿ.ಆನಂದ, ಮೋನಪ್ಪ ದೇವಸ್ಯ ಮತ್ತಿತರ ರು ಉಪಸ್ಥಿತರಿದ್ದರು

More articles

Latest article