Thursday, September 28, 2023

ಚಂದಳಿಕೆ: ಚಿನ್ನರ ಸಂಭ್ರಮ 2019 ಬೇಸಿಗೆ ಶಿಬಿರ ಉದ್ಘಾಟನೆ

Must read

ವಿಟ್ಲ: ವಿಟ್ಲ ಚಂದಳಿಕೆ ಶಾಲೆಯಲ್ಲಿ ನಡೆಯುವ ‘ಚಿನ್ನರ ಸಂಭ್ರಮ 2019’ ಬೇಸಿಗೆ ಶಿಬಿರವನ್ನು ಹಿರಿಯ ಕಲಾವಿದ ಶಿವಮೊಗ್ಗದ ಗರ್ತಿಗೆರೆ ರಾಗಣ್ಣ ಇವರು ಉದ್ಘಾಟಿಸಿದರು. ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಮೂರು ದಿನ ನಡೆಯುವ ಈ ಶಿಬಿರದಲ್ಲಿ ಮುಖವಾಡ ತಯಾರಿ, ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿ, ಕಥೆ ಕವನ ರಚನೆ, ಹಾಡುಗಾರಿಕೆ, ನೃತ್ಯ, ನಾಟಕ ಇವುಗಳ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿಗಳಿಂದ ನಡೆಸಲಾಗುವುದು.
ಈ ಸಂದರ್ಭದಲ್ಲಿ ರಂಗಕರ್ಮಿ ಮೂರ್ತಿ ದೇರಾಜೆ, ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಭವಾನಿ ರೈ ಕೊಲು, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ಚಂದಳಿಕೆ, ಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ ಗೌಡ, ಸಹಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

More articles

Latest article