ಬಂಟ್ವಾಳ: ಮಾನಸಿಕ ಹಾಗೂ ಬೌದ್ಧಿಕ ವಿಕಸನಕ್ಕೆ ಪೂರಕವಾದ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಕ್ಕಳು ತಮ್ಮ ರಜಾ ದಿನಗಳನ್ನು ಸದುಪಯೋಗಿಸಿಕೊಳ್ಳಬೇಕು. ರಜಾಕಾಲದ ಶಿಬಿರಗಳು ಮಕ್ಕಳ ಮಾನಸಿಕ ವಿಕಸನವನ್ನು ಮಾಡುವುದರೊಂದಿಗೆ ಅಗತ್ಯ ಸಾಮಾಜಿಕ ಜಾಗೃತಿ ಹಾಗೂ ಜೀವನ ಶಿಕ್ಷಣವನ್ನು ನೀಡುತ್ತದೆ ಎಂದು ಅರ್ಕುಳ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಡಾ.ಅರ್ಕುಳ ಬೀಡು ಜಯಕುಮಾರ ಶೆಟ್ಟಿ ತಿಳಿಸಿದರು.
ಡಾ.ಜಯಕುಮಾರ ಶೆಟ್ಟಿ ಅವರು ಇತ್ತೀಚೆಗೆ ಅರ್ಕುಳ ಚಾರಿಟೇಬಲ್ ಟ್ರಸ್ಟಿನ ಆಶ್ರಯದಲ್ಲಿ ಸ್ಥಳೀಯ ದ್ವಾರ ಸಮಿತಿ ಹಾಗೂ ಶ್ರೀ ದೇವಿ ಬಯಲಾಟ ಸಮಿತಿಯ ಸಹಯೋಗದೊಂದಿಗೆ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದ ಆವರಣದಲ್ಲಿ ಆಯೋಜಿಸಿದ ರಜಾಕಾಲದ ಶಿಬಿರ ’ವಿಕಾಸ-2019’ ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಜ್ಯತರಬೇತಿದಾರ ಮಂಜು ವಿಟ್ಲ ಅವರು ಮಾತನಾಡುತ್ತಾ ರಜಾಕಾಲದ ಶಿಬಿರಗಳು ಮಕ್ಕಳಲ್ಲಿ ಉತ್ತಮ ಆಸಕ್ತಿಗಳನ್ನು ಬೆಳೆಸುವುದರೊಂದಿಗೆ ಬುದ್ಧಿಯ ವಿಕಾಸಕ್ಕೆ ಪೂರಕವಾಗಿದೆ.ಮಕ್ಕಳ ಬೌದ್ಧಿಕ ವಿಕಸನಕ್ಕೆ ಪೂರಕವಾದ ಪರಿಸರವನ್ನು ಒದಗಿಸುವ ಬೇಸಿಗೆ ಶಿಬಿರಗಳು ಅತೀ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಅರ್ಕುಳ ಅಡ್ಯಾರ್‌ಗ್ರಾಮ ಪಂಚಾಯತ್‌ ಉಪಾದ್ಯಕ್ಷೆ  ಆಶಾ ಪ್ರಕಾಶ್, ಸದಸ್ಯರಾದ ಪವಿತ್ರಾ ಹಾಗೂ  ಸಂತೋಷ್‌ ತುಪ್ಪೆಕಲ್ಲು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಸ್ಥಳೀಯ 69 ಮಕ್ಕಳು ಭಾಗವಹಿಸಿದ್ದರು.ಈ ಶಿಬಿರದಲ್ಲಿ ಮಕ್ಕಳಿಗೆ ರಂಗ ಕಲೆ, ಭಾಷಣ ಕಲೆ, ಗುಂಪು ಚಟುವಟಿಕೆಗಳು, ಜೀವನ ಮೌಲ್ಯಗಳುಹಾಗೂ ಪೌರತ್ವದಬಗ್ಗೆ ತರಬೇತಿ ನೀಡಲಾಯಿತು. ವಿಕಾಸ ಶಿಬಿರದಲ್ಲಿ ಬಿಎಸ್‌ಎನ್‌ಎಲ್ ಮಾರುಕಟ್ಟೆ ಅಧಿಕಾರಿ ಕಂಪ ಸದಾನಂದ ಆಳ್ವ, ಮಂಟಮೆ ದಿನಕರ ಕರ್ಕೇರಾ, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ,  ಆಶಾ, ಶೋಭಾ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here