ಶ್ರೀ ಸತ್ಯಸಾಯಿ ಸೇವಾ ಪ್ರತಿಷ್ಠಾನ, ದೈಗೋಳಿ ಕುಡ್ಲಮುಗೇರು ಮಂಜೇಶ್ವರ ವತಿಯಿಂದ ಶ್ರೀ ಸತ್ಯಸಾಯಿ ಆರಾಧನಾ ಮಹೋತ್ಸವ ಹಾಗೂ ಶ್ರೀ ಸಾಯಿ ನಿಕೇತನ ಸೇವಾಶ್ರಮ ಕಟ್ಟಡದ ವಿಸ್ತರಿಸಿದ ಭಾಗದ ಅನಾವರಣ ಎ.21 ರಂದು ಆದಿತ್ಯವಾರ 9 ಗಂಟೆಗೆ ಸಾಯಿ ನಿಕೇತನ ಸೇವಾಶ್ರಮ ದೈಗೋಳಿಯಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಾಗೂ 9.30 ರಿಂದ ಶ್ರೀ ಸತ್ಯನಾರಾಯಣ ಪೂಜೆ ವೇದಮೂರ್ತಿ ಶ್ರೀ ರಾಮ ಭಟ್ಟ ಬೋಳಂತಕೋಡಿ ಅವರಿಂದ ಸಭಾ ಕಾರ್ಯಕ್ರಮ ಬೆಳಿಗ್ಗೆ 9.30ರಿಂದ ಯು.ಗಂಗಾಧರ ಭಟ್ ಅವರ ಅಧ್ಯಕ್ಷತೆಯಲ್ಲಿ, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರಿ ಯೋಗಾನಂದ ಸರಸ್ವತಿ ಸ್ವಾಮೀಜಿ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಅಪರಾಹ್ನ 2 ರಿಂದ ಕೋಳೂರು ಹವ್ಯಾಸಿ ಯಕ್ಷ ಬಳಗದವರಿಂದ “ಸುಧನ್ವ ಮೋಕ್ಷ-ವೀರವರ್ಮ ಕಾಳಗ” ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
