ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಜಿಲ್ಲಾ ಯೋಜನೆ ಆಶಾಸ್ಪೂರ್ತಿ ಅಂಗವಾಗಿ ನಾವೂರು ಅಂಗನವಾಡಿಗೆ 9000ರೂಪಾಯಿ ವೆಚ್ಚದಲ್ಲಿ ವಾಟರ್ ಪ್ಯೂರಿಫಯರ್ ಹಾಗೂ ಅಂಗನವಾಡಿಗೆ ಶೀಟ್ ಅಳವಡಿಸಿ ಹಸ್ತಾಂತರ ಮಾಡಲಾಯಿತು. ಸಮಾರಂಭದಲ್ಲಿ ರೋಟರಿ ವಲಯ ಕಾರ್ಯದರ್ಶಿ ನಾರಾಯಣ ಹೆಗ್ಡೆ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷರಾದ ಉಮೇಶ್ ನಿರ್ಮಲ್, ಕೋಶಾಧಿಕಾರಿ ಆಶಾಮಣಿ ರೈ, ಮಹಮ್ಮದ್ ಮುನಿರ್, ಪ್ರಾಯೋಜಕರಾದ ರಾಜ್ ಕುಮಾರ್, ನಾವೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಚನ್ ಕುಮಾರ್, ಅಂಗನವಾಡಿ ಸಲಹಾ ಸಮಿತಿ ಅಧ್ಯಕ್ಷರಾದ ರಾಜೀವಿ, ಸಹಾಯಕ ಅನಿತಾ, ವಸಂತ್, ಉಪಸ್ತಿತರಿದ್ದರು.