Wednesday, April 10, 2024

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಪದಾಧಿಕಾರಿಗಳ ಆಯ್ಕೆ ರೋನ್ಸ್ ಬಂಟ್ವಾಳ್ (ಅಧ್ಯಕ್ಷ) – ಅಶೋಕ್ ಎಸ್.ಸುವರ್ಣ (ಗೌ| ಪ್ರ| ಕಾರ್ಯದರ್ಶಿ)

ಮುಂಬಯಿ, ಎ.೦೬: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ೨೦೧೯-೨೦೨೧ರ ಸಾಲಿನ ಪದಾಧಿಕಾರಿಗಳ ಆಯ್ಕೆ ಇಂದಿಲ್ಲಿ ಶನಿವಾರ ಪೂರ್ವಾಹ್ನ ನಗರದ ಬಾಂದ್ರಾ ಪೂರ್ವದ ಖೇರ್‌ವಾಡಿ ಅಲ್ಲಿನ ರಾಜಯೋಗ್ ಹೊಟೇಲು ಸಭಾಗೃಹದಲ್ಲಿ ನಡೆದಿದ್ದು ನೂತನ ಅಧ್ಯಕ್ಷರಾಗಿ ರೋನ್ಸ್ ಬಂಟ್ವಾಳ್ (ವಿಜಯ ಕರ್ನಾಟಕ), ಗೌರವ ಪ್ರಧಾನ ಕಾರ್ಯದರ್ಶಿ ಆಗಿ ಅಶೋಕ್ ಎಸ್.ಸುವರ್ಣ (ಮೊಗವೀರ) ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆ ಗೊಳಿಸಿತು.

ಉಪಾಧ್ಯಕ್ಷ ರಂಗ ಎಸ್.ಪೂಜಾರಿ, (ಚಿಗುರು ಚಂದನ), ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ (ಕರ್ನಾಟಕ ಮಲ್ಲ), ಗೌರವ ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ (ಉದಯವಾಣಿ), ಜೊತೆ ಕಾರ್ಯದರ್ಶಿ ಜಯರಾಮ ಎನ್.ಶೆಟ್ಟಿ (ಯಶಸ್ವಿ ವ್ಯಕ್ತಿ), ಜೊತೆ ಕೋಶಾಧಿಕಾರಿ ಡಾ| ಜಿ.ಪಿ ಕುಸುಮಾ (ಸಾಫಲ್ಯ), ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಆಗಿ ಡಾ| ಶಿವ ಮೂಡಿಗೆರೆ (ಮುಂಬಯಿ ನ್ಯೂಸ್) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ| ದಿನೇಶ್ ಶೆಟ್ಟಿ ರೆಂಜಾಳ (ಉದಯವಾಣಿ), ವಿಶ್ವನಾಥ್ ವಿ.ಪೂಜಾರಿ ನಿಡ್ಡೋಡಿ (ಕರ್ನಾಟಕ ಮಲ್ಲ), ನಾಗರಾಜ್ ಕೆ.ದೇವಾಡಿಗ (ಉದಯವಾಣಿ), ಅನಿತಾ ಪಿ.ಪೂಜಾರಿ ತಾಕೋಡೆ (ಟೈಂಮ್ಸ್ ಆಫ್ ಬೆದ್ರ), ಅಶೋಕ್ ಆರ್.ದೇವಾಡಿಗ (ಕರ್ನಾಟಕ ಮಲ್ಲ), ಪ್ರೀತಂ ಎನ್.ದೇವಾಡಿಗ (ನಮ್ಮ ಟಿವಿ), ಜಯಂತ್ ಕೆ. ಸುವರ್ಣ (ಪಿಂಗಾರ) ಸರ್ವಾನುಮತದಿಂದ ಆಯ್ಕೆಯಾದರು.

ಸಲಹಾ ಸಮಿತಿ ಸದಸ್ಯರಾಗಿ ಸಿಎ| ಐ.ಆರ್ ಶೆಟ್ಟಿ, ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಡಾ| ಆರ್.ಕೆ ಶೆಟ್ಟಿ, ನ್ಯಾ| ರೋಹಿಣಿ ಜೆ.ಸಾಲ್ಯಾನ್, ಡಾ| ಸುನೀತಾ ಎಂ.ಶೆಟ್ಟಿ, ಡಾ| ಸುರೇಶ್ ಎಸ್.ರಾವ್ ಕಟೀಲು, ಗ್ರೇಗೋರಿ ಡಿಅಲ್ಮೇಡಾ, ಪಂಡಿತ್ ನವೀನ್‌ಚಂದ್ರ ಆರ್.ಸನೀಲ್, ಸುರೇಂದ್ರ ಎ.ಪೂಜಾರಿ, ಕಡಂದಲೆ ಸುರೇಶ್ ಎಸ್.ಭಂಡಾರಿ, ಸುಧಾಕರ್ ಉಚ್ಚಿಲ್, ಹಾಗೂ ವಿಶೇಷ ಆಮಂತ್ರಿತ ಸದಸ್ಯರುಗಳಾಗಿ ನ್ಯಾ| ವಸಂತ್ ಎಸ್.ಕಲಕೋಟಿ, ಸಾ.ದಯಾ (ದಯಾನಂದ್ ಸಾಲ್ಯಾನ್), ಗೋಪಾಲ್ ತ್ರಾಸಿ, ಕುಸುಮಾ ಸಿ.ಪೂಜಾರಿ, ಕರುಣಾಕರ್ ವಿ.ಶೆಟ್ಟಿ ಇವರನ್ನು ಸಭೆಯು ಐಕ್ಯಮತದಿಂದ ಆಯ್ಕೆ ಗೊಳಿಸಿತು.

ಸಂಘದ ಸಲಹಾಗಾರರಾಗಿದ್ದು ಮುಖ್ಯ ಚುನಾವಣಾಧಿಕಾರಿ ನ್ಯಾ| ಪ್ರಕಾಶ್ ಎಲ್.ಶೆಟ್ಟಿ ಹಾಗೂ ಚಾರ್ಟರ್ಡ್ ಎಕೌಂಟೆಂಟ್ ಆಗಿ ಅನನ್ಯ ಮತ್ತು ಧರ್ಮರ್ಥ ಸೇವೆಗೈಯುತ್ತಿರುವ ಸಿಎ| ಐ.ಆರ್ ಶೆಟ್ಟಿ ಅವರ ಸೇವೆಯನ್ನು ನೂತನ ಸಮಿತಿಯು ಸ್ಮರಿಸಿ ಅಭಿವಂದಿಸಿತು. ಇದೇ ಸಂದರ್ಭದಲ್ಲಿ ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು ಪತ್ರಕರ್ತ ಸದಸ್ಯರ ಆರೋಗ್ಯನಿಧಿಗಾಗಿ ೫೦,೦೦೦/- ರೂಪಾಯಿ ದೇಣಿಗೆಯನ್ನು ನೂತನ ಅಧ್ಯಕ್ಷರಿಗೆ ಹಸ್ತಾಂತರಿಸಿ ಶುಭಾರೈಸಿದರು. ರೋನ್ಸ್ ಬಂಟ್ವಾಳ್ ಪ್ರಸ್ತಾವನೆಗೈದ ಸಂಘದ ಯಶಸ್ಸಿಗೆ ಹಾಗೂ ಪದಾಧಿಕಾರಿಗಳ ಆಯ್ಕೆಗೆ ವಿಶೇಷವಾಗಿ ಸಹಕರಿಸಿದ ಸರ್ವ ಗಣ್ಯರನ್ನು, ಎಲ್ಲಾ ಮತದಾರ ಸದಸ್ಯರನ್ನು ಸ್ಮರಿಸಿದರು ಹಾಗೂ ವಿಶೇಷವಾಗಿ ಸದಾನಂದ ಸಾಫಲ್ಯ (ರಾಜಯೋಗ್) ಮತ್ತು ಉಪಸ್ಥಿತ ಗಣ್ಯರಿಗೆ ಪುಷ್ಫಗುಪ್ಚವನ್ನಿತ್ತು ಗೌರವಿಸಿದರು.

ಗತ ಸಾಲಿನಲ್ಲಿ ಅಗಲಿದ ಎಲ್ಲಾ ಹಿರಿಕಿರಿಯ ಪತ್ರಕರ್ತರು, ಹಾಗೂ ರಾಷ್ಟ್ರದ ಯೋಧರನ್ನು ಸಭೆಯ ಆದಿಯಲ್ಲಿ ಸ್ಮರಿಸಿ ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅಶೋಕ್ ಎಸ್.ಸುವರ್ಣ ಸ್ವಾಗತಿಸಿದರು. ಸಾ.ದಯಾ ಚುನಾವಣಾ ಫಲಿತಾಂಶ ಸಭೆ ಮುಂದಿಟ್ಟರು. ಡಾ| ಶಿವ ಮೂಡಿಗೆರೆ ಅಭಾರ ಮನ್ನಿಸಿದರು.

ಕಳೆದ ಮಾ.೨೩ರಂದು ಸಮಿತಿಗೆ ೧೫ ಸದಸ್ಯರ ಆಯ್ಕೆಯು ಚುನಾವಣೆ ಮೂಲಕ ನಡೆಸಲ್ಪಟಿದ್ದು, ಸಂಘದ ಸಂಸ್ಥಾಪಕರಾಗಿದ್ದು ದಶಕದಿಂದ ಗೌರವ ಪ್ರಧಾನ ಕಾರ್ಯದರ್ಶಿ ಆಗಿ ಸೇವಾ ನಿರತ ರೋನ್ಸ್ ಬಂಟ್ವಾಳ್ ಸಾರಥ್ಯದ ಬಳಗವು ಭಾರೀ ಮತಗಳನ್ನು ಪಡೆದು ಜಯಭೇರಿ ಸಾಧಿಸಿತ್ತು.

More from the blog

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...

ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ

ಮಂಗಳೂರು ಹಾಗೂ ಬಿಸಿರೋಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ ಸೋಮವಾರ ಬಿಸಿರೋಡ್ ಶಾಖೆಯಲ್ಲಿ ನಡೆಯಿತು. ಟೀಚರ್ಸ್ ಟ್ರೈನಿಂಗ್ ವಿಭಾಗದ ವಿದ್ಯಾರ್ಥಿನಿಯರಿಂದ ಪ್ರಸ್ತುತ ವರ್ಷದಲ್ಲಿ ತಯಾರಿಸಿದ ಎಲ್ಲಾ ಕಲಿಕಾ...