Sunday, April 7, 2024

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ನೂತನ ಪದಾಧಿಕಾರಿಗಳ ಪದಗ್ರಹಣ ಅರ್ಥವಿಲ್ಲದ ಮಾತಿಗೆ ಮೌನವೇ ಉತ್ತರವಾಗಲಿ : ನ್ಯಾ| ರೋಹಿಣಿ ಸಾಲ್ಯಾನ್

ಮುಂಬಯಿ, ಎ.೦೬: ಸಂಘಸಂಸ್ಥೆಗಳಲ್ಲಿ ವೈಮನಸ್ಸು ಸ್ವಾಭಾವಿಕವಾದುದು. ಆದರೆ ಗೌಪ್ಯತೆ ಪದಾಧಿಕಾರಿಗಳೇ ಬಹಿರಂಗ ಪಡಿಸುವುದರಿಂದ ವ್ಯಕ್ತಿಯವಲ್ಲ ಸಂಸ್ಥೆಯ ಹಿತಕ್ಕೆ ಮಾರಕವಾಗಿರುತ್ತದೆ. ನಾವು ಸದಾ ತಜಾ ಅಲೋಚನೆ ಮಾಡಿ ಮುನ್ನಡೆಯಬೇಕು. ಅದನ್ನು ತಮ್ಮೊಳಗೆ ಪರಿಹಾರ ಮಾಡಿಕೊಳ್ಳಬೇಕು. ಸಂಸ್ಥೆಯೊಳಗಿನ ವೈಮನಸ್ಸನ್ನು ಬುದ್ಧಿಜೀವಿಗಳು ಹೊರಗೆ ತಿಳಿಸಿದಾಗ ಮೂರನೇಯವರೇ ಲಾಭದಾಯಕರಸ್ಥರು ಆಗುವರು. ನಿನ್ನೆ ತನಕ ಬೇವು ತಿಂದು ಬಂದ ನಾವುಗಳು ಇವತ್ತಿನಿಂದ ಬೆಲ್ಲವನ್ನು ಸವಿದು ಹೊಸ ಬದುಕಿನತ್ತ ಸಾಗಬೇಕಾಗಿದೆ. ಸ್ವಾರ್ಹಿಗಳ ಅರ್ಥವಿಲ್ಲದ ಮಾತಿಗೆ ಮೌನವೇ ಉತ್ತರವಾಗಲಿ. ವಾಟ್ಸಾಪ್, ಫೇಸ್‌ಬುಕ್‌ಗಳನ್ನು ಆಯುಧವಾಗಿಸಿ ಬೇಕಾಬಿಟ್ಟಿ ಪ್ರಕಟನೆಗಳನ್ನು ಭಿತ್ತರಿಸುವುದೇ ದೋಡ್ಡ ಅಪರಾಧ ಮತ್ತು ಇದೊಂದು ಅಡ್ಡದಾರಿಯಾಗಿದೆ. ಇದು ಯಾರಿಗೂ ಶೋಭದಾಯಕ ಮಾರ್ಗವಲ್ಲ. ಒಳ್ಳೆ ಮನಸ್ಸಿನಿಂದ ಒಳ್ಳೇ ಕಾರ್ಯಕ್ಕೆ ಒಂದು ನಿರ್ಧಿಷ್ಟ ಉದ್ದೇಶವಿಟ್ಟುಕೊಂಡು ಬಂದವರಾದ ಪತ್ರಕರ್ತರು ಸಮಾಧಾನ ಪ್ರಧಾನರಾಗಬೇಕು. ತಾವು ಸ್ವಇಪ್ಛೆಯಿಂದ ಪತ್ರಕರ್ತ ವೃತ್ತಿ ಆಯ್ಕೆ ಮಾಡಿದವರು. ದೇಶದ ಮನೋಭಾವವನ್ನು ಸೃಷ್ಠಿಸುವ ಹೊಣೆಹೊತ್ತವರು. ತಾವು ಅಪ್ಪಿತಪ್ಪಿ ಬರೆದರೆ ನೀವು ದೇಶದ ಮನಸ್ಥಿತಿ (ಮೂಡ್) ಹಾಳು ಮಾಡಿದಂತೆ. ಆದುದರಿಂದ ಪತ್ರಕರ್ತರು ರಾಷ್ಟ್ರದ ಮನಸ್ಥಿತಿ ಸೃಷ್ಠಿಸುವ ಮೇಧಾವಿಗಳಾಗಬೇಕು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್, ಮುಂಬಯಿ ಉಚ್ಛನ್ಯಾಯಲಯದ ನ್ಯಾಯವಾದಿ ರೋಹಿಣಿ ಜೆ.ಸಾಲ್ಯಾನ್ ತಿಳಿಸಿದರು.

ಕಳೆದ ಶನಿವಾರ ಪೂರ್ವಾಹ್ನ ನಗರದ ಬಾಂದ್ರಾ ಪೂರ್ವದ ಖೇರ್‌ವಾಡಿ ಅಲ್ಲಿನ ರಾಜಯೋಗ್ ಹೊಟೇಲು ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ೨೦೧೯-೨೦೨೧ರ ಸಾಲಿನ ಪದಾಧಿಕಾರಿಗಳ ಆಯ್ಕೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ನ್ಯಾ| ಸಾಲ್ಯಾನ್ ಮಾತನಾಡಿದರು.

ಪತ್ರಕರ್ತರ ಸಂಘದ ಸಲಹಾ ಸಮಿತಿ ಸದಸ್ಯರಾದ ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಗ್ರೇಗೋರಿ ಡಿಅಲ್ಮೇಡಾ, ಪಂಡಿತ್ ನವೀನ್‌ಚಂದ್ರ ಆರ್.ಸನೀಲ್, ಕಡಂದಲೆ ಸುರೇಶ್ ಎಸ್.ಭಂಡಾರಿ, ಸುರೇಂದ್ರ ಎ.ಪೂಜಾರಿ, ಸುಧಾಕರ್ ಉಚ್ಚಿಲ್ ವೇದಿಕೆಯಲ್ಲಿ ಆಸೀನರಾಗಿದ್ದು ಸಂದರ್ಭೋಚಿತವಾಗಿ ಮಾತನಾಡಿ ನೂತನ ಸಮಿತಿಗೆ ಶುಭಾರೈಸಿದರು.

ನ್ಯಾ| ಮೋಹಿದ್ಧೀನ್ ಮುಂಡ್ಕೂರು ಉಪಸ್ಥಿತ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಪ್ರತಿಜ್ಞೆವಿಧಿ ಬೋಧಿಸಿದರು ಹಾಗೂ ಪತ್ರಕರ್ತ ಸದಸ್ಯರ ಆರೋಗ್ಯನಿಧಿಗಾಗಿ ೫೦,೦೦೦/- ರೂಪಾಯಿ ದೇಣಿಗೆ ನೂತನ ಅಧ್ಯಕ್ಷರಿಗೆ ಹಸ್ತಾಂತರಿಸಿ ಶುಭಾರೈಸಿದರು.

ನ್ಯಾ| ಮೋಹಿದ್ಧೀನ್ ಮಾತನಾಡಿ ಕಪಸಮ ಸ್ಥಾಪಣೆಯ ಆರಂಭದಲ್ಲೇ ನಾನು ಈ ಸಂಸ್ಥೆಯೊಂದಿಗೆ ಇದ್ದು ಸಲಹಿದವನು. ಯಾವುದೇ ಸಂಘ ಸಂಸ್ಥೆಗಳಲ್ಲೂ ಅಹಿತಕರ ಘಟನೆಗಳು ನಡೆಯುವುದು ಸ್ವಾಭಾವಿಕ. ಆದರೆ ವಿಷಯ ಮೈಮೇಲೆ ಎಳೆದುಕೊಂಡು ವೈರಾಗ್ಯವನ್ನೇ ಬೆಳೆಸಿಕೊಂಡರೆ ವ್ಯಕ್ತಿಗೂ ಸಂಸ್ಥೆಗೂ ಅಪತ್ತು ಸ್ವಾಭಾವಿಕ. ವೈಮನಸ್ಸು ಬೆಳೆಸಿ ಮುನ್ನಡೆದರೆ ನಿಜಾರ್ಥದ ನಿಸ್ವಾರ್ಥ ಸಮಾಜ ಸೇವೆ ಸಾಧ್ಯವಾಗದು. ಅದೂ ಪತ್ರಕರ್ತರೆಂದರೆ ರೇ ವರದಿ ಮಾಡಿ ಪತ್ರಿಕೆಯಲ್ಲಿ ಪ್ರಕಟಿಸುವುದು ಅಲ್ಲ. ವಿಷಯದ ಮೂಲವನ್ನು ಅಧ್ಯಯನ ಮಾಡಿ ನ್ಯಾಯ ಒದಗಿಸಿ ಇತರರಿಗೆ ಮಾದರಿ ಅಂತಣಿಸಬೇಕು. ಅವಾಗಲೇ ಪತ್ರಕರ್ತನ ಕಾಯಕ ಸಮಾಧಾನಕ ಮತ್ತು ಫಲದಾಯಕ ಆಗುವುದು ಎಂದರು.

ಯಾವೊತ್ತೂ ಬದಲಾವಣೆಯಿಂದ ಒಳ್ಳೇತನ ಸಾಧ್ಯವಾಗುತ್ತಿದ್ದು, ನಿನ್ನೆ ಇದ್ದವ ಇಂದಿಲ್ಲ ಇಂದು ಇದ್ದವ ನಾಳೆ ಇರಲಾರ ಅನ್ನುವುದು ಲೋಕದ ರೂಢಿ. ಆದ್ದರಿಂದ ಯಾವುದೇ ಸಂಸ್ಥೆಗಳಿಗೂಹೊಸಹೊಸ ಮುಖಗಳು ಬರಬೇಕು. ನೂತನ ಚೈತನ್ಯ ಹುಟ್ಟಬೇಕು. ಯುಗಾದಿ ಅದನ್ನೇ ಸಾರುವ ಹಬ್ಬವಾಗಿದೆ. ಯುಗ ಕಳೆದು ಮತ್ತೆ ಆದಿ ಎನ್ನುವಂತೆ ಈ ಸಂಸ್ಥೆಯೂ ಹೊಸ ದೆಶೆಯತ್ತ ಹೆಜ್ಜೆಯನ್ನಿರಿಸುತ್ತಿದೆ. ಇದಕ್ಕೆ ಪ್ರೋತ್ಸಹಿಸುವುದು ಪ್ರತೀಂಯೊಬ್ಬ ನಾಗರೀಕನ ಕರ್ತವ್ಯವಾಗಿದೆ. ಪತ್ರಕರ್ತರೆಂದರೆ ಎಲ್ಲಕ್ಕಿಂತ ಮೊದಲಾಗಿ ಸಮಾಜ ಸುಧಾರಕರು. ಸಮಾಜದ ಅಂಕುಡೊಂಕುಗಳನ್ನು ಹೋಗಲಾಡಿಸಿ ಸಮಾಜದ ಬೆಳವಣಿಗೆಗೆ ಸ್ಪಂದಿಸುವನೋ ಅವನೇ ನಿಜಾರ್ಥದ ಪತ್ರಕರ್ತ. ಹಿಂಸಾತ್ಮಕವಾದ ಎಲ್ಲಾ ಶಕ್ತಿಗಳನ್ನು ಮೀರಿನಿಂತ ಪೆನ್ನು ಪ್ರಪಂಚದ ಅಹಿಂಸಾತ್ಮಕವಾದಂತೆಹ ದೊಡ್ದ ಆಯುಧವಾಗಿದೆ. ಪೆನ್ನು ಹಿಡಿದ ಪತ್ರಕರ್ತರು ನಿಷ್ಠುರವಾದಿತ್ವ ಸಾಧಿಸಬೇಕು ಎಂದು ಕಡಂದಲೆ ಸುರೇಶ್ ತಿಳಿಸಿದರು.

ರೋನ್ಸ್ ಬಂಟ್ವಾಳ್ ಪ್ರಸ್ತಾವನೆಗೈದ ಮತದಾನಕ್ಕೆ ಅಡ್ಡಿ ಪಡಿಸುವುದೇ ಘೋರ ಅಪರಾಧ. ಅದರಲ್ಲೂ ಅಭ್ಯಥಿಗಳನ್ನೇ ತಡೆದು ನಿಲ್ಲಿಸುವುದು ಮಹಾಪಾಪ. ಅಲ್ಲದೆ ವಿಜೇತ ಅಭ್ಯಥಿಗಳನ್ನು ರಾಜೀನಾಮೆ ನೀಡಿಸಲು ಒತ್ತಡ ಹೇರಿ ಸಂಸ್ಥೆಯ ಜವಾಬ್ದಾರಿಯಿಂದ ತಡೆ ಹಿಡಿಯುವುದೆಂದರೆ ದೇಶದ್ರೋಹವೇ ಸರಿ. ಸ್ವಾಥಿಗಳ ವಿರೋಧತ್ವದ ವಿಷವನ್ನು ನಾನು ಅಮೃತವಾಗಿಸಿರುವ ಕಾರಣ ಈ ಸಂಸ್ಥೆಯ ಚುಕ್ಕಾಣಿ ಹಿಡಿಯುವಂತಾಗಿದೆ. ಸತ್ಯವನ್ನು ಒಪ್ಪದೇ ಸತ್ಯವಂತರನ್ನೇ ಸುಳ್ಳನಾಗಿಸುತ್ತಾ ಸಂಸ್ಥೆಯ ಮಾನವನ್ನೇ ಹರಾಜು ಹಾಕುವವರಿಂದ ಅಪೇಕ್ಷಿಸುವುದು ಆದರೂ ಏನು.? ಪತ್ರಕರ್ತರು ಪತ್ರಿಕಾ ಸ್ವಾತಂತ್ರ್ಯವನ್ನು ಸಮಾಜದ ಹಿತಕ್ಕಾಗಿ ಬಳಸಿ ಕೊಳ್ಳಬೇಕೇ ಹೊರತು ಸ್ವಾರ್ಥಕ್ಕಾಗಿಯಲ್ಲ. ರಾಷ್ಟ್ರದ ಪ್ರಜಾಪ್ರಭುತ್ವಕ್ಕೆ ಅನಾಚಾರ ಎಸಗುವರರನ್ನು ನಾನೂ ಎಂದಿಗೂ ಸಹಿಸಿದವನಲ್ಲ ಆದುದರಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ನಿರತನಾದರೂ ಸಮಾಜವೇ ನನ್ನ ಮತ್ತು ಕಪಸಮದ ಸೇವೆ ಗುರುತಿಸಿ ಕೊಂಡಿದೆ.ಇನ್ನೂ ನಾವೆಲ್ಲರೂ ಒಗ್ಗಟ್ಟಿನಿಂದ ಸಂಸ್ಥೆಯನ್ನು ಮುನ್ನಡೆಸೋಣ ಎಂದರು.

ಪತ್ರಕರ್ತರ ಸಂಘದ ಉಪಾಧ್ಯಕ್ಷ ರಂಗ ಎಸ್.ಪೂಜಾರಿ, ಗೌ| ಪ್ರ| ಕಾರ್ಯದರ್ಶಿ ಅಶೋಕ್ ಎಸ್.ಸುವರ್ಣ, ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ, ಗೌರವ ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ, ಜೊತೆ ಕಾರ್ಯದರ್ಶಿ ಜಯರಾಮ ಎನ್.ಶೆಟ್ಟಿ, ಜೊತೆ ಕೋಶಾಧಿಕಾರಿ ಡಾ| ಜಿ.ಪಿ ಕುಸುಮಾ, ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ| ದಿನೇಶ್ ಶೆಟ್ಟಿ ರೆಂಜಾಳ, ನಾಗರಾಜ್ ಕೆ.ದೇವಾಡಿಗ, ಅನಿತಾ ಪಿ.ಪೂಜಾರಿ ತಾಕೋಡೆ ಪ್ರೀತಂ ಎನ್. ದೇವಾಡಿಗ, ಜಯಂತ್ ಕೆ.ಸುವರ್ಣ, ವಿಶೇಷ ಆಮಂತ್ರಿತ ಸದಸ್ಯರಾದ ಸಾ.ದಯಾ (ದಯಾನಂದ್ ಸಾಲ್ಯಾನ್), ಗೋಪಾಲ್ ತ್ರಾಸಿ, ಕರುಣಾಕರ್ ವಿ.ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಸಲಹಾಗಾರರಾಗಿದ್ದು ಮುಖ್ಯ ಚುನಾವಣಾಧಿಕಾರಿ ನ್ಯಾ| ಪ್ರಕಾಶ್ ಎಲ್.ಶೆಟ್ಟಿ ಹಾಗೂ ಚಾರ್ಟರ್ಡ್ ಎಕೌಂಟೆಂಟ್ ಆಗಿದ್ದು ಅನುಪಮ ಸೇವೆಗೈಯುತ್ತಿರುವ ಸಿಎ| ಐ.ಆರ್ ಶೆಟ್ಟಿ ಅವರ ಸೇವೆ ಸಂಘವು ಸ್ಮರಿಸಿತು. ವಿಶೇಷವಾಗಿ ಉಪಸ್ಥಿತ ಸದಾನಂದ ಸಾಫಲ್ಯ (ರಾಜಯೋಗ್) ಇವರಿಗೆ ನ್ಯಾ| ರೋಹಿಣಿ ಸಾಲ್ಯಾನ್ ಪುಷ್ಫಗುಪ್ಚ ನೀಡಿ ಗೌರವಿಸಿದರು.

ಗತ ಸಾಲಿನಲ್ಲಿ ಅಗಲಿದ ಎಲ್ಲಾ ಹಿರಿಕಿರಿಯ ಪತ್ರಕರ್ತರು, ಹಾಗೂ ರಾಷ್ಟ್ರದ ಯೋಧರನ್ನು ಸಭೆಯ ಆದಿಯಲ್ಲಿ ಸ್ಮರಿಸಿ ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪದಾಧಿಕಾರಿಗಳು ಸಂಘದ ಯಶಸ್ಸಿಗೆ ಹಾಗೂ ಪದಾಧಿಕಾರಿಗಳ ಆಯ್ಕೆಗೆ ವಿಶೇಷವಾಗಿ ಸಹಕರಿಸಿದ ಸರ್ವ ಗಣ್ಯರನ್ನು, ಎಲ್ಲಾ ಮತದಾರ ಸದಸ್ಯರನ್ನು ಸ್ಮರಿಸಿದರು. ಅಶೋಕ್ ಎಸ್.ಸುವರ್ಣ ಸ್ವಾಗತಿಸಿ ಸಭಾ ಕಲಾಪ ನಡೆಸಿದರು. ಡಾ| ಶಿವ ಮೂಡಿಗೆರೆ ಕೃತಜ್ಞತೆ ಅರ್ಪಿಸಿದರು.

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...