2019 ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕಿನಾದ್ಯಂತ ಎ.3 ರಿಂದ ಎ.10 ರವರೆಗೆ ಮತದಾನ ಜಾಗೃತಿ ರಥ ಸಂಚಾರ ಹೋಗಲಿದ್ದು ಪಂಚಾಯತ್ ವ್ಯಾಪ್ತಿಯ ಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಬಂಟ್ವಾಳ
ತಾಲೂಕು ಪಂಚಾಯತ್
ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪ.ಜಾತಿ/ಪ.ಪಂಗಡ ಕಾಲನಿಗಳು, ಕೊರಗರ ಕಾಲನಿಗಳು ಹಾಗೂ ಜನವಸತಿ ಪ್ರದೇಶಗಳಿಗೆ ಮತದಾನ ಜಾಗೃತಿ ರಥವು ಸಂಚರಿಸಲಿದ್ದು ಸಂಬಂಧಪಟ್ಟ ಗ್ರಾಮ ಪಂಚಾಯತ್‌ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಈ ಬಗ್ಗೆ ವೈಯಕ್ತಿಕ ಗಮನ ಹರಿಸಿ ರಥದ ಚಾಲಕರಿಗೆ ಮಾರ್ಗದ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡುತ್ತಾರೆ.

ರಥ ಸಂಚರಿಸುವ ಮಾರ್ಗ ಮತ್ತು ದಿನಾಂಕ ಈ ಕೆಳಗಿನಂತಿವೆ.

.ಎ: 3 ರಂದು ಅಮ್ಮುಂಜೆ ಕರಿಯಂಗಳ ಬಡಗಬೆಳ್ಳೂರು ಕಳ್ಳಿಗೆ ಮೇರಮಜಲು ತುಂಬೆ ಪುದು
ಎ: 4 ಕಾವಳಮೂಡೂರು ಕಾವಳಪಡೂರು ಪಿಲಾತಬೆಟ್ಟು ಇರ್ವತ್ತೂರು ಚೆನ್ನೈತ್ತೋಡಿ ಕುಕ್ಕಿಪಾಡಿ ಸಂಗಬೆಟ್ಟು ರಾಯಿ ಅರಳ ಪಂಜಿಕಲ್ಲು ಅಮ್ಟಾಡಿ
ಎ: 5 ನಾವೂರು ಸರಪಾಡಿ ಮಣಿನಾಲ್ಕೂರು ಉಳಿ ಬಡಗಕಜೆಕಾರು
ಎ: 6 ಸಜಿಪಮುನ್ನೂರು ಸಜಿಪಮೂಡ ಸಜಿಪನಡು ಸಜಿಪಪಡು ಕುರ್ನಾಡು ಬಾಳೆಪುಣಿ ನರಿಂಗಾನ ಪಜೀರು
ಎ: 7
ಇರಾ ಮಂಚಿ ಕೊಳ್ನಾಡು ಸಾಲೆತ್ತೂರು ವಿಟ್ಲಪಡ್ನೂರು ನರಿಕೊಂಬು ಗೋಳ್ತಮಜಲು

ಎ: 8 .ಬಾಳ್ತಿಲ ಬರಿಮಾರು ಮಾಣಿ ಪೆರಾಜೆ ಕಡೇಶ್ವಾಲ್ಯ ಕೆದಿಲ ಪೆರ್ನೆ

ಎ: 9 .
ಬೋಳಂತೂರು ವೀರಕಂಭ ಅಳಿಕೆ ಪೆರುವಾಯಿ ಮಾಣಿಲ ಕರೋಪಾಡಿ ಕನ್ಯಾನ

ಎ: 10
ಪುಣಚ ಕೇಪು ವಿಟ್ಲಮುಡ್ನೂರು ಇಡ್ಕಿದು ನೆಟ್ಲಮುಡ್ನೂರು ಅನಂತಾಡಿ . ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಿ ಮಾಹಿತಿ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here