ವಿಟ್ಲ: ಪುಣಚ ರಂಗಮೂರ್ತಿಯವರ ಮನೆಯಲ್ಲಿ ಪುಣಚ, ಕೇಪು, ಬಲ್ನಾಡು ಗ್ರಾಮದ ಬಿ.ಜೆ.ಪಿ ಕಾರ್‍ಯಕರ್ತರ ಸಭೆ ನಡೆಯಿತು.
ಬಿಜೆಪಿ ಕಾರ್‍ಯಕರ್ತರ ಸಭೆಯನ್ನುದ್ದೇಶಿಸಿ ದಕ್ಷಿಣ ಕನ್ನಡ ಬಿ.ಜೆ.ಪಿ ಲೋಕಸಭಾ ಅಭ್ಯರ್ಥಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷ ರವಿಶಂಕರ್ ಮಿಜಾರ್, ಪುತ್ತೂರು ಶಾಸಕ ಸಂಜೀವ ಮಠಂದೂರು , ಪುತ್ತೂರು ಬಿ.ಜೆ.ಪಿ ಮಂಡಲಾಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೊಡು, ರಾಜೀವ ಭಂಡಾರಿ ಮತ್ತು ಬಿ.ಜೆ.ಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


