ಬಂಟ್ವಾಳ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷ ಹೊರಡಿಸಿದ ಪ್ರಣಾಳಿಕೆಯಲ್ಲಿ ಪ್ರತಿ ಬಡ ಕುಟುಂಬಕ್ಕೆ ವಾರ್ಷಿಕ 72,000 ಸಾವಿರ ಆರ್ಥಿಕ ಸಹಾಯ ನೀಡುವ “ನ್ಯಾಯ ಯೋಜನೆ”ಯು ತುಂಬಾ ನಿಷ್ಪ್ರಯೋಜಕವಾಗಿದೆ. ವಾರ್ಷಿಕ ಆದಾಯದ ಮಿತಿಯಲ್ಲಿ ವಿವಿಧ ಸ್ತರದ ಸರಕಾರದ ಸವಲತ್ತು ಪಡೆಯುವ ಬಿಪಿಎಲ್ ಹಾಗೂ ಬಡ ಕುಟುಂಬದವರ ವಾರ್ಷಿಕ ಆದಾಯ ಮಿತಿ ಹೆಚ್ಚಾಗಲಿದ್ದು, “ನ್ಯಾಯ ಯೋಜನೆ”ಯು ಇವರ ಪಾಲಿಗೆ ಈಗಾಗಲೇ ಸಿಗುವ ಸವಲತ್ತುಗಳನ್ನು ಕಸಿಯುವ ಯೋಜನೆಯಾಗಿ” ಅನ್ಯಾಯ ಮಾಡಿದಂತಿದೆ. ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣೆ ನಿರ್ಮಾಣ ಸಮಿತಿಯ ಮಾಧ್ಯಮ ಸಮನ್ವಯ ಪ್ರಮುಖ್ ಹಾಗೂ ತಾಲೂಕ್ ಪಂಚಾಯತ್ ಸದಸ್ಯ ಪ್ರಭಾಕರ್ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಲವು ಯೋಜನೆಗಳ ಪ್ರಯೋಜನ ಪಡೆಯಲು ಕುಟುಂಬದ ವಾರ್ಷಿಕ ಆದಾಯ ಮಾನದಂಡವಾಗಿ ಪರಿಗಣಿಸುತ್ತವೆ. ಅಂದರೆ ಬಡಕುಟುಂಬಗಳಿಗೆ ಸಿಗುವ ಯೋಜನೆಗಳಾದ ಬಸವ ವಸತಿ ಯೋಜನೆ, ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ಪಿಂಚಣಿ, ವಿವಿಧ ಸ್ತರದ ವಿದ್ಯಾರ್ಥಿ ವೇತನ, ಬಿಪಿಎಲ್ ಪಡಿತರ ಚೀಟಿ, ಆಯುಷ್ಮಾನ್ ಆರೋಗ್ಯ ವಿಮೆ ಸೇರಿದಂತೆ ಹತ್ತು ಹಲವು ಯೋಜನೆಗಳಿಗೆ ಮಂಜೂರಾತಿ ಗೊಲ್ಲಳು~, ಸರಕಾರ ವಿಧಿಸಿದ ವಾರ್ಷಿಕ ಆದಾಯ ಮಿತಿ 50,000 ಸಾವಿರ ಕ್ಕಿಂತಲೂ ಕಡಿಮೆ ಇದೆ. ಇದರಿಂದ “ನ್ಯಾಯ ಯೋಜನೆ” ಜಾರಿಯಾದಲ್ಲಿ ಬಡ ಫಲಾನುಭವಿಯು ಇಷ್ಟರವರೆಗೆ ಪಡೆಯುತ್ತಾ ಇರುವಾ~, ಎಲ್ಲಾ ಸವಲತ್ತುಗಳು ರದ್ದಾಗುವ ಬೀತಿ ಎದುರಾಗಲಿದೆ. ಈ ಯೋಜನೆಯಂತೆ, ಯಾವುದೇ ಕಾರಣಕ್ಕೂ 72,000 ಸಾವಿರ ಪ್ರತಿ ಕುಟುಂಬಕ್ಕೆ ನೀಡಲು ಯಾರ ಸರಕಾರದಿಂದಲೂ ಸಾಧ್ಯವಿಲ್ಲ ಎಂದು ಅನೇಕ ಆರ್ಥಿಕ ತಜ್ಞರು ಅಭಿಪ್ರಾಯ ಮಂಡಿಸಿದ್ದಾರೆ. ಇದರಿಂದ ಯು.ಪಿ.ಎ. ಸರಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಖಚಿತ ಪಡಿಸ್ಸಿಯೆ ಕಾಂಗ್ರೆಸ್ ಪಕ್ಷ ಯೋಜನೆ ಪ್ರಣಾಳಿಕೆಯಲ್ಲಿ ಪ್ರಕಟಿಸಿರಬಹುದು ಎಂದು ಸಂಶಯ ಸಾರ್ವಜನಿಕರಲ್ಲಿ ವ್ಯಕ್ತಪಡಿಸುತ್ತಿದೆ.
ಆದ್ದರಿಂದ ಅವೈಜ್ಞಾನಿಕ ಮತ್ತು ಸುಳ್ಳು ಭರವಸೆಗಳ ಪ್ರಣಾಳಿಕೆಗಳನ್ನು ನಂಬಬೇಡಿ. ತಮ್ಮ ಮುಂದಿನ ಕೌಟುಂಬಿಕ ನೆಮ್ಮದಿ ಹಾಗೂ ರಾಷ್ಟ್ರ ಸುಭೀಕ್ಷೆಗಾಗಿ ಪ್ರಜ್ಞಾವಂತ ಮತದಾರರು ಬಿಜೆಪಿಗೆ ಮತವನ್ನು ನೀಡಿ ಮಗದೊಮ್ಮೆ ಪ್ರಧಾನಿ ಪೀಠವನ್ನು ನರೇಂದ್ರ ಮೋದಿ ಅಲಂಕರಿಸುವಂತೆ ಪ್ರಭಾಕರ ಪ್ರಭು ವಿನಂತಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here