ವಿಟ್ಲ: ಖುವ್ವತುಲ್ ಇಸ್ಲಾಂ ದಫ್ ಕಮೀಟಿ ವಿಟ್ಲ ಪರ್ತಿಪ್ಪಾಡಿ ಇದರ 45 ನೆ ವಾರ್ಷಿಕೋತ್ಸವದ ಅಂಗವಾಗಿ ಧಾರ್‍ಮಿಕ ಕಾರ್‍ಯಕ್ರಮವು ವಿಟ್ಲ ಪರ್ತಿಪ್ಪಾಡಿ ಜುಮಾ ಮಸೀದಿಯ ಜೀಲಾನಿ ವೇದಿಕೆಯಲ್ಲಿ ನಡೆಯಿತು.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಖತೀಬರಾದ ಅಬ್ದುಲ್ ರಹಮಾನ್ ಫೈಝಿ ಉಸ್ತಾದರು ವಹಿಸಿದರು. ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬರಾದ ಬಹು ಅಬ್ದುಲ್ ಸಲಾಂ ಲತೀಫ್ ಮತ ಪ್ರಭಾಷಣಗೈದರು. ಕಾರ್‍ಯಕ್ರಮವನ್ನು ಅಬ್ದುಲ್ ಗಫೂರ್ ದಾರಿಮಿ ಮುದರ್ರಿಸ್ ಪೆರುವಾಯಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಸುಮಾರು 50 ವರ್ಷಗಳಿಂದ ಜುಮಾ ಮಹ್ಸರ ಹೇಳಿದ ದಫ್ ಕಮಿಟಿಯ ಏಳಿಗೆಗಾಗಿ ಶ್ರಮಿಸಿದ ಆದಂ ಕುಂಞಿಯವರಿಗೆ ಜಮಾಅತ್ ವತಿಯಿಂದ ಅಧ್ಯಕ್ಷರಾದ ಕೆ. ಪಿ ಇಸ್ಮಾಯಿಲ್, ಇಬ್ರಾಹಿಂ ಹಾಜಿ ಮದಕ ಶಾಲು ಹೊದಿಸಿ ಸನ್ಮಾನಿಸಿದರು. ವೇದಿಕೆಯಲ್ಲಿ ಎ. ಕೆ ಉಸ್ತಾದ್, ಜುಮಾ ಮಸೀದಿ ಕಾರ್‍ಯದರ್ಶಿ ಕೆ. ಎಸ್. ಸುಲೈಮಾನ್, ಜತೆ ಕಾರ್‍ಯದರ್ಶಿ ಸಯ್ಯದ್ ಅಲಿ, ಪಿ. ಎಂ. ಹಕೀಮ್ ಪರ್ತಿಪ್ಪಾಡಿ, ಹಕೀಮ್ ಮುಸ್ಲಿಯಾರ್ ಸದರ್ ಮುಹಲಿಮ್ ಸಿ. ಎಚ್. ಇಬ್ರಾಹಿಂ ಮುಸ್ಲಿಯಾರ್, ರಫೀಕ್ ಪರ್ತಿಪ್ಪಾಡಿ ,ಕಲಂದರ್ ಪರ್ತಿಪ್ಪಾಡಿ ಮುಂತಾದವರು ಉಪಸ್ಥಿತರಿದ್ದರು. ಉಮ್ಮರ್ ದಾರಿಮಿ ಪರ್ತಿಪ್ಪಾಡಿ ಕಾರ್‍ಯಕ್ರಮ ನಿರೂಪಿಸಿದರು.
