Thursday, October 26, 2023

ಶರತ್ ಮಡಿವಾಳ ಮನೆಗೆ ನಳಿನ್ ಭೇಟಿ

Must read

ಬಂಟ್ವಾಳ: ವರ್ಷದ ಹಿಂದೆ ಬಿ.ಸಿ.ರೋಡಿನಲ್ಲಿ ಕೊಲೆಗೀಡಾದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ನಿವಾಸಕ್ಕೆ ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಸೋಮವಾರ ಭೇಟಿ ನೀಡಿದರು.

 

 

ಈ ಸಂದರ್ಭ ಶರತ್ ಮಡಿವಾಳ ಅವರ ತಂದೆ,ತಾಯಿಯವರ ಆಶೀರ್ವಾದ ಪಡೆದ ನಳಿನ್ ಕುಮಾರ್ ಅವರ ಆರೋಗ್ಯವನ್ನು ವಿಚಾರಿಸಿದರು.

ಈ ಸಂದರ್ಭ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಉಳಿಪಾಡಿ, ಜಿಲ್ಲಾ ಉಪಾಧ್ಯಕ್ಷರಾದ ರವಿಶಂಕರ್ ಮಿಜಾರ್, ಜಿ.ಆನಂದ, ಜಿಲ್ಲಾ ವಕ್ತಾರರಾದ ಹರಿಕೃಷ್ಣ ಬಂಟ್ವಾಳ,  ಜೀತೆಂದ್ರ ಕೊಟ್ಟಾರಿ,  ಮಾಜಿ ಶಾಸಕ ರುಕ್ಮಯ ಪೂಜಾರಿ ,ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಭಟ್, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರ.ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಉಪಾಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ, ಗಣೇಶ್ ರೈಮಾಣಿ, ಸಚ್ಚಿದಾನಂದ ಶೆಟ್ಟಿ ಮುಂಬೈ ಹಾಗೂ ಪಕ್ಷದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಬಳಿಕ ಸಜೀಪಮೂಡ ಗ್ರಾಮದಲ್ಲಿ ಪಕ್ಷದ ಕಾರ್ಯಕರ್ತರೊಬ್ಬರ ಮನೆಯಲ್ಲಿ  ಭೇಟಿಯಾಗಿ ಚರ್ಚಿಸಿದರು. ಪರಿಸರದಲ್ಲಿ ಮತಯಾಚನೆಗೈದರು. ಈ ಸಂದರ್ಭ ತಾ.ಪಂ. ನ ಮಾಜಿ ಸದಸ್ಯೆ ಯೊಬ್ಬರ ಸಹಿತ ಕೆಲ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಬಳಿಕ ಕಡೇಶ್ವಾಲ್ಯ ದೇವಸ್ಥಾನಕ್ಕೆ ಭೇಟಿ ನೀಡಿದರಲ್ಲದೆ ಕಡೇಶ್ವಾಲ್ಯದ ಕ್ಯಾಶ್ಯೊ ಕಾರ್ಖಾನೆಗೆ ಭೇಟಿ ನೀಡಿ ಕಾರ್ಮಿಕರಲ್ಲಿ ಮತಯಾಚನೆಗೈದರು. ಬಳಿಕ ಪಚ್ಚಿನಡ್ಕ ಸೇಸಪ್ಪ ಕೋಟ್ಯಾನ್ ಅವರ ಬೀಡಿ ಉದ್ಯಮದ ಕಾರ್ಖಾನೆಗೂ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್  ಅಲ್ಲಿನ ಕಾರ್ಮಿಕರಲ್ಲಿ ಮತಯಾಚನೆಗೈದರು. ಬಳಿಕ ಬಡಗಬೆಳ್ಳೂರು, ಅಮ್ಮುಂಜೆ ಪರಿಸರದಲ್ಲಿ ಮತಯಾಚನೆಗೈದರು. ಈ ಸಂದರ್ಭ ಪಕ್ಷದ ಸ್ಥಳೀಯ ಮುಖಂಡರು ಹಾಜರಿದ್ದರು.

More articles

Latest article