Tuesday, October 31, 2023

ಬಂಟ್ವಾಳದಲ್ಲಿ ನಕಲಿ ಮತದಾನಕ್ಕೆ ಯತ್ನಿಸಿ ಮೂವರು ಪೋಲೀಸರ ಅತಿಥಿಯಾಗಿದ್ದಾರೆ

Must read

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಮೂರು ನಕಲಿ ಮತದಾನದ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಮಧ್ಯಾಹ್ನ ದ ವೇಳೆ ಕೈಕಂಬ ಸಮೀಪದ ಪರ್ಲೀಯಾ ಸರಕಾರಿ ಶಾಲೆಯಲ್ಲಿ ನಕಲಿ ಮತದಾನ ಮಾಡಲು ಯತ್ನಿಸುವ ವೇಳೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇವರಿಬ್ಬರೂ ಕೂಡ ಬೇರೊಬ್ಬರ ಹೆಸರನ್ನು ಬಳಕೆ ಮಾಡಿ ಮತದಾನಕ್ಕೆ ಯತ್ನಿಸಿದ್ದರು ಎಂದು ಅಧಿಕಾರಿಗಳು ಪೋಲೀಸರಿಗೆ ತಿಳಿಸಿದ್ದಾರೆ.
ಸಂಜೆ ವೇಳೆ ಗೆ ಕಲ್ಲಡ್ಕ ದ ಗ್ರಾ.ಪಂ.ಕಟ್ಟಡದಲ್ಲಿನ ಮತಗಟ್ಟೆಯ ನೆಟ್ಲ ಬೂತ್ ನಲ್ಲಿ ಇದೇ ರೀತಿ ನಕಲಿ ಮತದಾನ ಮಾಡಲು ಯತ್ನಿಸಿ ಅತ ಕೂಡ ಚುನಾವಣೆ ಕರ್ತವ್ಯ ಅಧಿಕಾರಿಗಳ ಮೂಲಕ ಪೋಲೀಸರ ಅತಿಥಿಯಾಗಿ ದ್ದಾನೆ.
ಬಂಟ್ವಾಳ ನಗರ ಠಾಣಾ ಎಸ್‌.ಐ.ಚಂದ್ರಶೇಖರ್ ಅವರು ಮೂವರನ್ನು ನಗರ ಠಾಣೆ ಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ.

More articles

Latest article