ಬಂಟ್ವಾಳ: ಕಾಂಗ್ರೇಸ್ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಅವರು ಇಂದು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಲ್ಲಿ ಟೆಂಪಲ್ ರನ್ ಆರಂಬಿಸಿದ್ದಾರೆ.
ಬೆಳಿಗ್ಗೆ ಸುಮಾರು 7.30 ರ ವೇಳೆಗೆ ಬಿಸಿರೋಡಿನ ಪ್ರಸಿದ್ಧ ದೇವಸ್ಥಾನ ರಕ್ತೇಶ್ವರಿ ದೇವಸ್ಥಾನ ಕ್ಕೆ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಟೆಂಪಲ್ ರನ್ ಆರಂಭಿಸಿದ್ದಾರೆ.



ಅ ಬಳಿಕ ಮೊಡಂಕಾಪು ಇನ್ಪೆಂಟ್ ಜೀಸಸ್ ಚರ್ಚ್, ಮೊಗರ್ನಾಡು ದೇವಸ್ಥಾನ, ಪಾಣೆಮಂಗಳೂರು ಕಲ್ಲುರ್ಟಿ ದೇವಸ್ಥಾನ, ನಂದಾವರ ವಿನಾಯಕ ದೇವಸ್ಥಾನ, ಪಣೋಲಿಬೈಲು ಕಲ್ಲುರ್ಟಿ ದೇವಸ್ಥಾನ, ನೆಟ್ಲ ದೇವಸ್ಥಾನಕ್ಕೆ ಬೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ ದ ಬಳಿಕ ಕಲ್ಲಡ್ಕ ಪೇಟೆಯ ಲ್ಲಿ ಅಂಗಡಿ ಹಾಗೂ ಮನೆಗಳಿಗೆ ತೆರಳಿ ಮತಯಾಚನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಇಂದು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಲ್ಲಿ ಪ್ರಚಾರ ಕಾರ್ಯ ಕ್ಕೆ ಚಾಲನೆ ನೀಡಿದ್ದೇನೆ. ಮತದಾರರ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ.ಕಲ್ಲಡ್ಕ ದಲ್ಲಿ ನನ್ನ ಜೊತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಮತಯಾಚನೆ ಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಅ ಬಳಿಕ ಕಡೆಶೀವಾಲಯ, ಪೆರಾಜೆ, ಬರಿಮಾರು, ಬಂಟ್ವಾಳ, ಅಜಿಲಮೊಗರು, ಅಲ್ಲಿಪಾದೆ, ಸಿದ್ದಕಟ್ಟೆ ,ಬೆಂಜನಪದವು, ಪೊಳಲಿ ಮುಂತಾದ ಕಡೆಗಳ ದೇವಾಲಯ ಹಾಗೂ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಮತಯಾಚನೆ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಪ್ರಮುಖರಾದ ಪ್ರಶಾಂತ್ ಕುಲಾಲ್ ಪದ್ಮನಾಭ ರೈ, ಸಂಜೀವ ಪೂಜಾರಿ, ಹಸೈನಾರ್, ಮತ್ತಿರರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.