ಬಂಟ್ವಾಳ: ಇಂದು ಮದುವೆ ಇದ್ದರೂ ಸಹ ಮೊದಲು ಓಟ್ ಮಾಡಬೇಕು ಎಂಬ ಉದ್ದೇಶದಿಂದ ನವಜೋಡಿ ಬೆಳಿಗ್ಗೆ ಓಟ್ ಮಾಡಿ ನಂತರ ಮದುವೆಗೆ ತೆರಳಿದ ಪ್ರಸಂಗವೊಂದು ನಡೆದಿದೆ.
ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ಸುಭಾಸ್ ನಗರದ ಬೇಂಕೆ ನಿವಾಸಿ ಅಶೋಕ್ ಪುಷ್ಪಲತಾ ಅವರ ಪುತ್ರಿ ಪ್ರತಿಜ್ಞ ಅವರು ಬೇಂಕ್ಯೆ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಚಲಾಯಿಸಿದ್ದಾರೆ.

ತಮ್ಮ ಮದುವೆ ವಿಧಿ ವಿಧಾನಗಳಿಗೆ ತೆರಳುವ ಮುನ್ನ ತಮ್ಮ ಹಕ್ಕನ್ನು ಚಲಾಯಿಸಿಯೇ ತೆರಳಿದ್ದಾರೆ. ಈ ಮೂಲಕ ಪ್ರತಿಯೊಬ್ಬರೂ ಕೂಡ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಸಂದೇಶ ನೀಡಿದ್ದಾರೆ.
ಅದಲ್ಲದೆ, ಮದುಮಗ ಸುಮಿತ್ ಪೂಜಾರಿ ಅವರು ತನ್ನ ಬಾವಿ ಪತ್ನಿ ಪ್ರತಿಜ್ಞ ಅವರ ಜೊತೆ ಪೊಳಲಿ ಸರಕಾರಿ ಶಾಲೆಯ ಮತಗಟ್ಟೆಗೆ ತೆರಳಿ ಮತಚಲಾಯಿಸಿದರು.
ಈ ನವ ಜೋಡಿಯು ಹಸಮಣೆ ಏರಿ ಸತಿಪತಿಗಳಾಗುವ ಮುನ್ನವೇ ಮತದಾನ ಮಾಡಿ ಮಾದರಿಯಾಗಿದ್ದಾರೆ.