ಬಂಟ್ವಾಳ: ನಮ್ಮನ್ನು ನೀವು ಹರಸಿ ಹಾರೈಸುವ ರೀತಿಯಲ್ಲಿ ನಾಳೆ ನಡೆಯುವ ಮತದಾನ ದೇಶಕ್ಕಾಗಿ ಮಾಡಬೇಕು ಎಂಬ ಬಿತ್ತಿಪತ್ರ ಹಾಗೂ ನೃತ್ಯ ದ ಮೂಲಕ ಗಮನ ಸೆಳೆದದ್ದು ಸಿದ್ದಕಟ್ಟೆಯ ಮದುವೆ ಮಂಟಪ.

ಮತದಾನ ಕಡ್ಡಾಯವಾಗಿ ಮಾಡಿ ಎಂಬ ಘೋಷ ವಾಕ್ಯದ ನೃತ್ಯ ವಿಶೇಷ ರೀತಿಯಲ್ಲಿ ಕಂಡು ಬಂದದ್ದು ಮದುವೆ ಸಮಾರಂಭವೊಂದರಲ್ಲಿ.
ಇವತ್ತು ಪೂಜೆ ಹೋಮ ಕನ್ಯಾದಾನ ನಡೆಯಿತು ನಾಳೆ ಮತದಾನ ಮಾಡಿ ಎಂದು ಬರೆಯಲಾಗಿತ್ತು..
ಬಂಟ್ವಾಳ ತಾಲೂಕಿನ ಹರ್ಷಲಿ ಸಭಾ ಭವನದಲ್ಲಿ ಇಂದು ನಡೆದ ಸಂತೋಷ್ ಬಂಗೇರ, ಪ್ರಮೀಳಾ ಮದುವೆ ಸಮಾರಂಭದಲ್ಲಿ ಮದುಮಗ ಕೈಯಲ್ಲಿ ಕಡ್ಡಾಯ ಮತದಾನ ಮಾಡಿ ಎಂಬ ಘೋಷಣೆಯ ಬಿತ್ತಿಪತ್ರವನ್ನು ಹಿಡಿದು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ಜೊತೆಗೆ ಮದುಮಕ್ಕಳು ಆರತಕ್ಷತೆಗೆ ಮಂಟಪಕ್ಕೆ ಬರುವ ಮುನ್ನ ಮದುಮಗನ ಸ್ನೇಹಿತರು ಸೇರಿ ನೃತ್ಯ ಕೂಡ ಮಾಡಿದ್ದರು. ಬಾರತದ ಬಾವುಟ ಹಿಡಿದು ವಂದೇ ಮಾತರಂ ಗೀತೆಯ ಮೂಲಕ ಮತದಾನ ಮಾಡುವ ಜಾಗೃತಿ ಮೂಡಿಸಿದರು. ರಾಯಿ ಗ್ರಾಮದ ಶಾಂತಿಪಲ್ಕೆಯ ಯುವಕ, ಪುತ್ತೂರಿನ ಯುವತಿಗೆ ಇಂದು ಮದುವೆ ಸಮಾರಂಭ ನಡೆದಿತ್ತು.