Tuesday, September 26, 2023

ದ್ವೀಪರಾಷ್ಟ್ರ ಬಾಹ್ರೇಯ್ನ್‌ನ ಬೆಳ್ಳಿಪರದೆಯಲ್ಲಿ ವಿಜೃಂಭಿಸಲಿದೆ ‘ದೇಯಿಬೈದೆತಿ’

Must read

ಮುಂಬಯಿ: ಬಾಹ್ರೇಯ್ನ್ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಕಂಡುಕೇಳರಿಯದ ಅದ್ಭುತ ಕಥಾನಕ ಇದು ಪ್ರತಿಯೊಬ್ಬ ತಾಯಿಯ ಸಹಾಸಗಾಥೆ, ತನ್ನ ದೇಹದ ರಕ್ತಬಸಿದು ಹೆತ್ತುಹೊತ್ತು ಸಲುಹುವತಾಯಿ ಎಂಬ ಕರುಣಾಮಯಿಯು ರಾಜ್ಯದ ಪ್ರಜೆಗಳ ಒಳಿತಿಗಾಗಿ ತನ್ನ ಪ್ರಾಣವನ್ನೇ ಅರ್ಪಣೆಗೈದ ಸಾಮಾನ್ಯ ಮಹಿಳೆಯ ಅಸಮಾನ್ಯ ವೀರಗಾಥೆ. ಈ ತುಳು ಚಿತ್ರವು ದ್ವೀಪರಾಷ್ಟ್ರ ಬಾಹ್ರೇಯ್ನ್‌ನಲ್ಲಿ ಇದೇ ಏಪ್ರಿಲ್.26ನೇ ಶುಕ್ರವಾರ ಸಂಜೆ 3 ಗಂಟೆಗೆ ಮನಮದಲ್ಲಿ ಇರುವ ಅಲ್ಹಮ್ರಾ ಸಿನಿಮಾ ಚಿತ್ರಮಂದಿರದಲ್ಲಿಪ್ರದರ್ಶನ ಕಾಣಲಿದೆ.

ತುಳುನಾಡಿಗರ ರೋಚಕ ಇತಿಹಾಸವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿಯು ತುಳು ಚಿತ್ರರಂಗದಲ್ಲೇ ಮೊಟ್ಟಮೊದಲ ಬಾರಿಗೆ ಅದ್ಭುತವಾಗಿ ನಿರ್ಮಾಣಗೊಂಡ ಚಿತ್ರವೆಂದು ಭಾರಿ ಮೆಚ್ಚುಗೆ ವ್ಯಕ್ತಪಡಿಸಿ “ಯು” ಪ್ರಮಾಣಪತ್ರ ನೀಡಿದೆ.

2 ಗಂಟೆ 50 ನಿಮಿಷಗಳ ಕಾಲ ಪ್ರೇಕ್ಷಕರನ್ನು 500 ವರ್ಷಗಳ ಹಿಂದಕ್ಕೆ ಕೊಂಡೊಯ್ಯುದು ಚಿಂತನೆಗೆ ಈಡುಮಾಡುವ ಈ ಚಿತ್ರವು ತಮ್ಮತಮ್ಮ ತಾಯಂದಿರ ತ್ಯಾಗಮಯ ಬದುಕನ್ನು ನೆನೆದು ಬಿಗಿದಪ್ಪಿ ರೋದಿಸುತ್ತಾ, ಯುವಪೀಳಿಗೆ ಜೀವನದ ಮಾರ್ಗದರ್ಶನವನ್ನು ನೀಡಲಿದೆ. ಕನ್ನಡ, ತಮಿಳು, ತುಳು ಚಿತ್ರರಂಗದಲ್ಲಿ ಸುಮಾರು 25 ವರ್ಷಗಳ ಕಾಲ ದುಡಿದು ಅನುಭವ ಹೊಂದಿರುವ ಸೂರ್ಯೋದಯ ಪೆರಂಪಳ್ಳಿ ನಿರ್ದೇಶನದ ಚೊಚ್ಚಲ ಚಲನಚಿತ್ರ ಇದಾಗಿದೆ.

ಈಚಿತ್ರಕ್ಕಾಗಿ 500 ವರ್ಷಗಳ ಹಿಂದಿನ ಕಾಲಕ್ಕೆ ಸರಿಹೊಂದುವ ಭವ್ಯ ಮನೆಗಳಸೆಟ್’ಗಳನ್ನು ನಿರ್ಮಿಸಲಾಗಿ ಆ ಕಾಲದ ಕರ್ನಾಟಕ ಕರಾವಳಿಗರ ಜನಜೀವನ, ಆಚಾರ ವಿಚಾರ, ಉಡುಗೆ ತೊಡುಗೆಗಳ ಓರಣಗಳನ್ನು, ತುಳುನಾಡಿನ ಅಗೋಚರ ಸಂಪ್ರದಾಯಗಳ ಕಟ್ಟುಪಾಡುಗಳನ್ನು ಈ ಚಿತ್ರದಲ್ಲಿ ಬಿಂಬಿಸಲಾಗಿದೆ. ಲಕ್ಷ್ಮಣ ಕೆ.ಅಮೀನ್ ಅರ್ಪಿಸುವ ಸಂಕ್ರಿಮೋಷನ್ ಪಿಕರ್‍ಸ್ ಬ್ಯಾನರ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ದೇವ್‌ರಾಜ್ ಪಾಲನ್, ರಾಜ್ ಕೃಷ್ಣ, ಅಮಿತ್ ರಾವ್ ಅವರ ಸಹನಿರ್ದೇಶನವಿದ್ದು ಸಂಜೀವ ಪೂಜಾರಿ ಹೆರ್ಗ, ಕಿರಣ್ ಹೆಗೆ ಬಿಜ್ರಿ ಅವರ ನಿರ್ಮಾಣ ನಿರ್ವಹಣೆಯಿದೆ.

ಈ ಚಿತ್ರದಲ್ಲಿ ಕಂಚಿನಕಂಠ ಎಂದೇ ಖ್ಯಾತಿ ಪಡೆದ ಕರಾವಳಿಯ ಕಲಾವತಿ ದಯಾನಂದ್ ಅವರ ಜೊತೆಗೆ ಸೂರ್ಯೋದಯ ಪೆರಂಪಳ್ಳಿ, ಲಹರೀ ಕೋಟ್ಯಾನ್, ಸುರೇಶ್ ಸಾಲ್ಯಾನ್, ಕಾಲೇಶ್ ಅರವರ ಹಿನ್ನೆಲೆ ಗಾಯನವಿದೆ..ಭಾಸ್ಕರ್ ರಾವ್ ಸಂಗೀತ, ಮಣಿಕಾಂತ ಕದ್ರಿ ಅವರ ಹಿನ್ನೆಲೆ ಸಂಗೀತವಿದೆ. ರವಿ ಸುವರ್ಣ ಮತ್ತು ಹರೀಶ್ ಪೂಜಾರಿ ಕುಕ್ಕುಂಜೆ ಅವರ ಛಾಯಾಗ್ರಹಣ, ಮೋಹನ್ ಕಲ್ಸಂಕ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ರವಿ ಪೂಜಾರಿ ಹಿರಿಯಡ್ಕ ಹಾಗೂ ದಿನೇಶ್ ಸುವರ್ಣ ರಾಯಿ ಅವರು ಕಲಾನಿರ್ದೇಶಕರಾಗಿ ಅದ್ಭುತವಾಗಿ ತಮ್ಮಕೈಚಳಕತೋರಿದ್ದಾರೆ.

ಉಮೇಶ್ ಪೂಜಾರಿ ಬೆಳ್ತಂಗಡಿ ಸಹನಿರ್ಮಾಪಕರಾಗಿದ್ದು, ಈ ಚಿತ್ರದ ಸಾಹಿತ್ಯ, ಚಿತ್ರಕಥೆ, ಸಂಭಾಷಣೆ, ನಿರ್ಮಾಣ ಹಾಗೂ ನಿರ್ದೇಶನವನ್ನು ಸೂರ್ಯೋದಯ ಪೆರಂಪಳ್ಳಿ ನಿರ್ವಹಿಸಿದ್ದಾರೆ. ಈ ಚಿತ್ರದ ಟಿಕೇಟುಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಬಾಹ್ರೇಯ್ನ್ ಬಿಲ್ಲವಾಸ್ ಅಧ್ಯಕ್ಷ ಸುರೇಂದ್ರ ಉದ್ಯಾವರ ಮೊಬಾಯ್ಲ್ ಸಂಖ್ಯೆ 009783982392 ಸಂಪರ್ಕಿಸಲು ಸಂಘಟಕರು ಕೋರಿದ್ದಾರೆ.

More articles

Latest article