ವಿಟ್ಲ: ಪುಣಚ ಗ್ರಾಮದ ಕೃಷ್ಣಗಿರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎ. ೬ ರಂದು ಕೃಷ್ಣಗಿರಿ ಗೆಳೆಯರ ಬಳಗದ ಸಹಯೋಗದಲ್ಲಿ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ, ಗೆಳೆಯರಬಳಗದ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ.
ಶನಿವಾರ ಶಾಲಾ ಧ್ವಜಾರೋಹಣದ ಬಳಿಕ ಶ್ರಿಸತ್ಯನಾರಾಯಣ ಪೂಜೆ ಆರಂಭಗೊಳ್ಳಲಿದೆ. ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆಯ ಬಳಿಕ ಕೃಷ್ಣಗಿರಿ ಶ್ರೀ ಮಹಿಷಮರ್ದಿನಿ ಯಕ್ಷಗಾನ ಕಲಾಮಂಡಳಿ ಸದಸ್ಯರಿಂದ ’ರಣವೀಳ್ಯ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಆ ಬಳಿಕ ಬರೆಂಜ ಮತ್ತು ಕುರುಡಕಟ್ಟೆ ಅಂಗನವಾಡಿ ಮಕ್ಕಳಿಂದ ಕಾರ್‍ಯಕ್ರಮ, ಸಂಜೆ 4 ರಿಂದ ಶಾಲಾ ವಿದ್ಯಾರ್ಥಿಗಳಿಂದ, ಹಳೆ ವಿದ್ಯಾರ್ಥಿಗಳಿಂದ ನಾನಾ ವಿನೋದಾವಳಿಗಳು ನಡೆಯಲಿದೆ. ರಾತ್ರಿ ಕೃಷ್ಣಗಿರಿ ಕಲಾತಂಡದ ಸದಸ್ಯರಿಂದ ’ಕಾರ್ನಿಕದ ಸ್ವಾಮಿ ಕೊರಗಜ್ಜೆ’ ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here