Monday, September 25, 2023
More

    ಕೇಪು: ನರ್ಸರಿ ಶಾಲೆ ಆರಂಭ: ಪೂರ್ವಭಾವಿ ಸಭೆ

    Must read

    ವಿಟ್ಲ: ನಮ್ಮ ಊರ ಅಭಿವೃದ್ಧಿಯಲ್ಲಿ ಶಾಲೆಗಳು ಪ್ರಮುಖವಾಗಿರಬೇಕು, ಈ ಶಾಲೆಯು ಶತಮಾನ ಪೂರೈಸುವ ಹಂತದಲ್ಲಿದೆ, ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಶಿಕ್ಷಣ ಪಡೆದಿರುವುದರಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಆಗಿದೆ. ಈ ಶಾಲೆಯ ಅಭಿವೃದ್ಧಿ ನಮ್ಮ ಕನಸಾಗಬೇಕು, ಅದನ್ನು ನನಸು ಮಾಡಲು ಎಲ್ಲರೂ ಕೈ ಜೋಡಿಸಬೇಕು ಎಂದು ಸಾಮಾಜಿಕ ಕಾರ್‍ಯಕರ್ತ ಪ್ರಭಾಕರ ಶೆಟ್ಟಿ ದಂಬೆಕಾನ ತಿಳಿಸಿದರು.
    ಅವರು ಕೇಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆವಿದ್ಯಾರ್ಥಿಗಳು, ಊರಿನ ಪ್ರಮುಖರು ಸೇರಿ ಯಲ್ ಕೆಜಿ ಯುಕೆಜಿ ತರಗತಿಗಳ ಆರಂಭಿಸುವ ಬಗ್ಗೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತಾನಾಡಿದರು.
    ಸಭೆಯ ಅಧ್ಯಕ್ಷತೆಯನ್ನು ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ ವಹಿಸಿದ್ದರು. ಅತಿಥಿಗಳಾಗಿ ಅಶೋಕ ಇರಾಮೂಲೆ ದೇವದಾಸ ರೈ ಗುತ್ತು ಬಾಲಕೃಷ್ಣ ಶೆಟ್ಟಿ ಬೇಂಗ್ರೊಡಿ, ವಿಷ್ಣು ಶರ್ಮ, ಅಂಗನವಾಡಿ ಕಾರ್‍ಯಕರ್ತೆ ಸುಲೋಚನಾ ಯು. ಪೂಜಾರಿ ಶಾಲಾ ಮುಖ್ಯ ಶಿಕ್ಷಕಿ ಸರೋಜ ಕೆ. ಅನಿಸಿಕೆ ವ್ಯಕ್ತ ಪಡಿಸಿದರು.
    ದೈಹಿಕ ಶಿಕ್ಷಕ ಸುರೇಶ್ ಶೆಟ್ಟಿ ಕಾರ್‍ಯಕ್ರಮ ನಿರ್ವಹಿಸಿ ಶಿಕ್ಷಕಿ ನೀತಾ ಮಾರ್ಸೆಲಿನ್ ವಂದಿಸಿದರು.

     

    More articles

    LEAVE A REPLY

    Please enter your comment!
    Please enter your name here

    Latest article