ಈ ಜಗತ್ತೊಮ್ಮೆ
ನಾಶವಾಗಿ
ಮರುಹುಟ್ಟಬೇಕು..!



ಮುಗಿಲೆತ್ತರದ ಬಿಲ್ಡಿಂಗ್
ಸಾವಿರಾರು ವೆಹಿಕಲ್
ಮಾರುದ್ದ ಬ್ರಿಡ್ಜ್
ಹೀಗೆ ಎಲ್ಲಾ ಮಾನವನಿರ್ಮಿತ
ಇದ್ದಕ್ಕಿದ್ದಂತೆ ಮಣ್ಣಾಗಿಬಿಡಬೇಕು
ಏನು ಎತ್ತ ಅರಿವಾಗುವ ಮುನ್ನ
ಈ ಭೂಮಿಯಲ್ಲಿ
ಮಾನವನಿದ್ದ ಸಣ್ಣ ಕುರುಹುಗಳು
ಇರಬಾರದು
ಎಲ್ಲಾ ಕಡೆಯಲ್ಲಿ
ಮರ ಗಿಡಗಳು ಹುಟ್ಟಬೇಕು
ನದಿಗಳು ಸ್ವತಂತ್ರವಾಗಿ
ಹರಿಯಬೇಕು
ಗಾಳಿಗಳು ಹಿತವಾಗಿ ಬೀಸಬೇಕು
ಹೊಸ ಜೀವಿಗಳು ಹುಟ್ಟಬೇಕು
ಜೊತೆಗೆ ಮಾನವನೂ ಮರುಹುಟ್ಟು
ಪಡೆಯಬೇಕು
ಆದರೆ…
ಮಾನವ ಎಲ್ಲಾ ಪ್ರಾಣಿಗಳಂತಿರಬೇಕು
ಬುದ್ಧಿ ಅಭಿವೃದ್ಧಿ ಹೊಂದಲೇ ಬಾರದು
ನಾಳೆಯ ಚಿಂತೆ ಇರಬಾರದು
ಸುಖಕ್ಕಾಗಿ ಕೂಡಿಡಬಾರದು
ಪ್ರಾಣಿಯಂತೆ ಬೇಟೆಯಾಡಿ
ಬದುಕಿದರು ಪರವಾಗಿಲ್ಲ
ಸ್ವಾರ್ಥಕ್ಕಾಗಿ ಕೊಲ್ಲಬಾರದು
ರಾಜ್ಯಭಾರ ಮಾಡುವ ಕನಸು ಬೀಳಬಾರದು
ಪರಿಸರದ ಜೊತೆ ಹೊಂದಿಕೊಂಡು
ಬದುಕಿದರೆ ಸಾಕು
ಆವಿಷ್ಕಾರಗಳ ಶಕ್ತಿಯೇ ಇರಬಾರದು
ಒಟ್ಟಾರೆ ತಾನು ಬದುಕುವ
ಹುಂಬತನದಲ್ಲಿ
ಪರಿಸರಕ್ಕೆ ಕಟುಕನಾಗಬಾರದು..!
✍ಯತೀಶ್ ಕಾಮಾಜೆ