ಏಕೆ ಈ ಪರಿ ಮುನಿಸು ರಾಧೆಯೆ
ಮುರಳಿನಾದವು ಕೇಳದೆ….
ಮೊಗವ ತಿರುಗಿಸಿ ನಿಂತೆ ಯಾತಕೆ
ಒಲವಭಾವವ ಅರಿಯದೆ….!

ನೂರು ಗೋಪಿಕೆಯರಿದ್ದರೇನು
ರಾಧೆಯೊಬ್ಬಳೇ ಅಲ್ಲವೆ..
ಸಾವಿರ ಪ್ರೇಮದ ಹನಿಗಳ ಸಾಲಲಿ
ರಾಧೆ ಬೇರೆಯೇ ಅಲ್ಲವೆ…?
ಜನ್ಮ ಜನ್ಮದ ಪ್ರೇಮ ಕುಸುಮವ
ಮುನಿಸು ಕದಡುವುದೇತಕೆ…
ತಿರುಗಿ ಒಮ್ಮೆ ಬಳಸಿ ನಿಲ್ಲು
ಮುನಿಸು ನಿನ್ನ ಕರಗದೆ…!
ಹೃದಯಕಮಲದಿ ನೀನೇ ಚೆಲುವೆ
ಕೋಪವೇತಕೆ ಸುಮ್ಮನೆ…
ರಾಧೆಯಿಲ್ಲದ ಶ್ಯಾಮನೆಲ್ಲಿಹ
ರಾಗವಾಲಿಸು ಮೆಲ್ಲನೆ…!!
