ದೇವಾಲಯ ಹಿರಿಯರ ನೆಮ್ಮದಿ ತಾಣ
ನಮಗೇಕೆ ಎಂದು ಅಣುಕಿಸುವ ತರುಣರು|
ಆಗಾಗ ಭಕ್ತಿ ಶ್ರದ್ಧೆಯಲ್ಲಿ ಮಿಂದ ಭಕ್ತರಂತೆ
ದೈವವೇ ತಮಗೊಲಿದಂತೆ ನಟಿಸುವರಯ್ಯಾ||
ಆರಾಧನೆಯ ನೆಪದಲ್ಲಿ
ಲಲನಾಮಣಿಯರ ಕಣ್ತುಂಬಿಕೊಳ್ಳಲು
ಅದೆಂಥ ಸೋಗು ಹಾಕುವರಯ್ಯಾ|
ಕೈ ಮುಗಿದು ಸುತ್ತುತ್ತಲೇ ಗರ್ಭಗುಡಿಯ
ಎತ್ತೆತ್ತ ಕಣ್ಣು ಹಾಯಿಸಿ ಏನೇನೋ ನೆನೆಯುವರಯ್ಯಾ||
ತೋರಿಕೆಯ ಸೋಗಲಾಡಿ ಸುಬ್ಬರಿಗೆ ಗೊತ್ತಿಲ್ಲ
ಮಲಿನ ಮನ ಎಳೆದುಕೊಳ್ಳುವ ಕರ್ಮಗಳ|
ಇನ್ನಾದರೂ ಬದಲಾಯಿಸಿ ಮನಸ್ಥಿತಿ
ಅರಿತು ನಡೆದರೆ ನಿಜ ಭಕ್ತಿ ಮಾರ್ಗವ
ಮನ್ನಿಸಿ ಮುನ್ನಡೆಸುವನಯ್ಯಾ ನನ್ನೇಶ್ವರ||

 

*ಬಸವರಾಜ ಕಾಸೆ*

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here