ಕೆಟ್ಟದು ಮಾಡಿ ಇಟ್ಟುಕೊಂಡು ಕಲ್ಮಶಗಳ
ಉದ್ದೇಶ ಸಾಧನೆಗೆ ಹೊರಟಿಹರು ನೋಡಯ್ಯಾ|
ಹುಡುಕುಡುಕಿ ನಿನ್ನ ಗುಡಿ ಗೋಪುರಗಳ
ಎಡೆಬಿಡದೆ ಎಡತಾಕಿ ಎಡೆ ನೀಡುವರಯ್ಯಾ||
ಹೊರಗೆ ದುರಾಸೆಗಳಲ್ಲಿ ಕೊಬ್ಬಿ ಮೆರೆದು
ಕಷ್ಟ ಬಂದಾಗ ನಿನ್ನ ನಾಮ ಸ್ಮರಿಸಿ|
ವಿವಿಧ ಪೂಜೆ ಹರಕೆಗಳ ಮೂಲಕ ನಿನಗೆ
ಬೇಕಾದಂತೆ ಆಮಿಷ ಒಡ್ಡುವರಲ್ಲಯ್ಯಾ||
ಕಪಟವಿಲ್ಲದ ಮನಗಳಿಗೆ ಬೇಕಿಲ್ಲ ಇದಾವುದು
ಬಲ್ಲವರಾರು ಮಾಡುವ ಕೆಲಸದಲ್ಲಿ ಒಳ್ಳೆಯದು|
ಕುಳಿತಲ್ಲೇ ನಿಷ್ಕಲ್ಮಶದಿಂದ ತೋರಿದರೆ ಭಕ್ತಿ
ಒಲಿದೊಲಿದು ಬರುವನು ಕೇಳಯ್ಯಾ
ಬೇಡ ಬೇಡವೆಂದರೂ ನನ್ನೇಶ್ವರ||

 

*ಬಸವರಾಜ ಕಾಸೆ*

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here