ಜೋಡಿ ನಕ್ಷತ್ರಗಳ ಸರಳ ಮಿನುಗು
ಕುಣಿಕುಣಿದು ಬರಸೆಳೆಯುವ ಕರೆಯೋಲೆ
ಬಂದರೆ ಗುಟ್ಟೊಂದು ಪಿಸುಗುಡಲು
ಕೆಣಕಿ ಹಾಕುವುದು ಕೇಕೆ ಆ ನಿನ್ನ ಕಿವಿಯೋಲೆ

ವಿಧ ವಿಧವಾದ ನವನವೀನ ಬಣ್ಣ
ಪಡೆದು ಕೇಳುವಿಕೆಯ ಮಧುರ ಸ್ಪರ್ಶ
ನಾಚಿ ನಲಿದು ಆಡುತ್ತಿಹವು ಉಯ್ಯಾಲೆ
ಆ ತಳುಕು ಬಳುಕುಗಳಿಗೆ ಹರ್ಷವೋ ಹರ್ಷ

ಹಲವಾರು ಲೋಹಗಳ ನೂರಾರು ಆಕಾರ
ಮೆರೆದಿವೆ ಚೆಂದಗಳ ತಂದಿಟ್ಟು ನಿನಗೆ
ಮುಂಗುರುಳ ಸರಿಸುವ ನೆಪದಲ್ಲಿ ನೀನಿದ್ದಾಗ
ಶೃಂಗಾರಗೊಂಡು ನಾಚಿವೆ ನಕ್ಕು ಹಾಗೀಗೆ

ತಿಳಿಯಾದ ತೆಳು ತ್ವಚೆಯ ಕಿವಿ ಕಾಂತಿ
ಹುಷಾರು ಭಾರವಾಗಿ ಆದೀತು ವಿಸ್ತಾರ
ನನ್ನ ಅಸೂಯೆ ಕಂಡು ಮರುಕಪಟ್ಟಿತು
ಅದು ಕನವರಿಸಿ ನಿನಗೆ ಹೇಳಿ ಹೇಳಿ ಎಚ್ಚರ

ಸಾವಿರಾರು ಅಂದಗಳ ಕುಶಲೋಪರಿ
ಆ ಅಂಚಿನಲ್ಲಿಯೇ ಮಿಂಚು ತುಂಬೆದೆಯ ಭಾವ
ಸಂಸ್ಕೃತಿಯ ಸೊಬಗಿನ ಅನಾವರಣ
ಹಿತವೆನಿಸಿ ಮನಕ್ಕೀಗ ಆನಂದದ ಜೀವ

 

*ಬಸವರಾಜ ಕಾಸೆ*

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here