ಬರಹ : ಎಂ. ಎನ್ ಕುಮಾರ್ ಮೆಲ್ಕಾರ್
ಚಿತ್ರ : ಸ್ವರಾಜ್ ಸ್ಟುಡಿಯೋ ಮೆಲ್ಕಾರ್
ಹಣ್ಣುಗಳ ರಾಜ ಮಾವು ಮಾರುಕಟ್ಟೆಯಲ್ಲಿ ಮಿಂಚುತ್ತಿದ್ದಂತೆಯೇ ಬೇಸಿಗೆಯ ಧಗೆಗೆ ತಂಪೆರೆಯಲು ಕಲ್ಲಂಗಡಿ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಪಡೆಯುತ್ತಿದೆ.


ಮನೆಗಳಿಗೆ ಅತಿಥಿಗಳು ಬಂದಾಗ, ಮದುವೆಯಂತಹ ಸಮಾರಂಭಗಳು ದೇವಸ್ಥಾನದ ಬ್ರಹ್ಮಕಲೋಶೋತ್ಸವದಲ್ಲಿ ಅತಿಥಿಗಳ ಬಾಯಾರಿಕೆಯನ್ನು ತಣಿಸಲು ಹೋಟೆಲ್ ಜ್ಯೂಸ್ ಸೆಂಟರ್‌ಗಳಲ್ಲಿ ಕಲ್ಲಂಗಡಿ ಹಣ್ಣಿನ ರಸ ಜನಪ್ರಿಯವಾಗಿದೆ. ಈಗ ಫ್ರಿಜ್ ಬಳಕೆ ಸಾಮಾನ್ಯವಾಗಿರುವುದರಿಂದ ಜ್ಯೂಸ್ ತಯಾರಿಸಿಟ್ಟು ಬಳಸುವುದು ಸುಲಭ ಸಾಧ್ಯ. ಇತರ ಹಣ್ಣುಗಳಂತೆ ದುಬಾರಿಯಲ್ಲ ಕಲ್ಲಂಗಡಿ. ಈ ಎಲ್ಲಾ ಕಾರಣಗಳಿಂದ ಮಗುವಿನಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಕಲ್ಲಂಗಡಿ ಅತೀ ಪ್ರಿಯವಾಗಿದೆ.
ಮಾರಕ ರೋಗಕ್ಕೆ ರಾಮಬಾಣ
ಕಲ್ಲನ್ನು ಕರಗಿಸಬಲ್ಲ ಕಲ್ಲಂಗಡಿಹಣ್ಣು
ಕಲ್ಲಂಗಡಿಯಲ್ಲಿ ಮೇದಸ್ಸು, ತೇವಾಂಶ, ಖನಿಜಾಂಶ, ಸಾರಜನಕ, ಕ್ಯಾಲ್ಸಿಯಂ ಕಬ್ಬಿಣ, ಪಾಸ್ಪರಸ್ ಮುಂತಾದ ಪೋಷಕಾಂಶಗಳು ಇರುವುದರಿಂದ ಕಾಮಾಲೆ, ಉರಿಮೂತ್ರ, ಮಲಬದ್ಧತೆ, ಕಿಡ್ನಿ ತೊಂದರೆ, ವಾಂತಿಬೇಧಿಗೆ ಹಾಗೂ ದೇಹವು ಉರಿಯುತ್ತಿದ್ದರೆ ಒಂದು ಲೋಟ ಕಲ್ಲಂಗಡಿ ಹಣ್ಣಿನ ರಸ ಸ್ವಲ್ಪ ಉಪ್ಪು ಬೆರೆಸಿ ಸೇವಿಸುವುದರಿಂದ ದೇಹದ ಉರಿ ಗುಣವಾಗುವುದು. ಮಾರಕ ರೋಗಗಳಿಗೆ ಕಲ್ಲಂಗಡಿ ರಾಮಬಾಣವಾಗಿದೆ.
ಮೂಲತಃ ಅಫ್ರಿಕಾದ ದಕ್ಷಿಣ ಭಾಗದಲ್ಲಿ ಕಲ್ಲಂಗಡಿ ತೆವಳುವ ಬಳ್ಳಿಯ ಹಣ್ಣು ಕೆಂಪು ಬಣ್ಣದ ತಿರುಳು ರಸಭರಿತ ಜಪಾನಿನ ಕಲ್ಲಂಗಡಿ ತಳಿಯೊಂದರಲ್ಲಿ ಬೀಜಗಳೇ ಇಲ್ಲ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಕಲ್ಲಂಗಡಿ ಬೆಳೆಸುವುದು ಚೀನಾದಲ್ಲಿ.
ಕಲ್ಲಂಗಡಿ ಹಣ್ಣು ಹಾಸನ, ಚಿತ್ರದುರ್ಗ, ಕುಂದಾಪುರ, ಬೈಂದೂರು, ಹಾವೇರಿ, ಶಿವಮೊಗ್ಗ ದಾವಣಗೆರೆ ಮತ್ತು ಹೊನ್ನಾವರ ಪರಿಸರದಿಂದ ಮಾರುಕಟ್ಟೆಗೆ ಬರುತ್ತದೆ. ಅಲ್ಲದೆ ದಕ್ಷಿಣ ಕನ್ನಡ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಪಕ್ಕದ ಗದ್ದೆಯಲ್ಲಿ ಧಾರಾಳವಾಗಿ ಕಲ್ಲಂಗಡಿಯನ್ನು ಬೆಳೆಸಿ ಜಾತ್ರಾ ಮಹೋತ್ಸವದಂದು ವಿಕ್ರಯಿಸುವುದನ್ನು ಕಾಣಬಹುದು. ಇದೀಗ ಮಂಗಳೂರು ಮಾರುಕಟ್ಟೆಗೆ ದಿನ ಒಂದಕ್ಕೆ ೪-೫ ಲಾರಿಗಳು ಕಲ್ಲಂಗಡಿ ಹಣ್ಣುಗಳು ಬಂದು ಮಂಗಳೂರಿನಿಂದ ಗ್ರಾಮಾಂತರ ಪ್ರದೇಶಗಳಿಗೆ ರವಾನೆಯಾಗುತ್ತಿದೆ. ಈಗ ಕೆ.ಜಿ.ಗೆ ರೂ ೧೫-೧೮ರಲ್ಲಿ ವಿಕ್ರಯವಾಗುತ್ತಿರುವುದು.
೨೦ ವರ್ಷದಿಂದ ರಖಂ ವ್ಯಾಪಾರ ಮಾಡುತ್ತಿರುವ ಪಾಣೆಮಂಗಳೂರಿನ ಬಂಗ್ಲೆ ಗುಡ್ಡೆಯ ಪಿ. ಬಿ. ಅಬ್ದುಲ್ ಸಲಾಂ ಮೆಲ್ಕಾರ್ ಪರಿಸರದಲ್ಲಿ ಒಂದು ಲೋಡ್ ಲಾರಿಯಲ್ಲಿ ಬಂದ ಕಲ್ಲಂಗಡಿ ಮಾರುತ್ತಿದ್ದು, ಮಾರುಕಟ್ಟೆಯಲ್ಲಿ ಕಲ್ಲಂಗಡಿಯ ದರ ದಿನಾ ಬದಲಾಗುತ್ತಿದ್ದು ಲೋಡ್‌ಗಳಲ್ಲಿ  ಬಂದಾಗ ನಷ್ಟವನ್ನು ಅನುಭವಿಸ ಬೇಕಾಗುತ್ತದೆ ಎನ್ನುತ್ತಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here