ಬಂಟ್ವಾಳ: ಕಲ್ಲಡ್ಕ ಸಮೀಪದ ನೆಟ್ಲ ಬಳಿಯ ಪಿಲಿಂಜ ನಿವಾಸಿ 65 ವರ್ಷದ ವೃದ್ದೆ ಧರ್ಣಮ್ಮ ಅವರಿಗೆ ಕಲ್ಲಡ್ಕ ದ ನೆಟ್ಲ ಪರಿಸರದ ” ಕುಟುಂಬ ” ಸದಸ್ಯರ ಸಹಕಾರ ಹಾಗೂ ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಅವರ ಮುತುವರ್ಜಿಯಿಂದ ನಿರ್ಮಿಸಿ ಕೊಟ್ಟ ನೂತನ ಮನೆಯ ಹಸ್ತಾಂತರ ಇಂದು ನಡೆಯಿತು.



ಮನೆಯವರೆಲ್ಲರನ್ನು ಕಳೆದುಕೊಂಡು ದಿಕ್ಕುತೋಚದ ಸ್ಥಿತಿಯಲ್ಲಿ ದ್ದ ಧರ್ಣಮ್ಮ ಅಜ್ಜಿಯ ಮನೆ ಬೀಳುವ ಹಂತದಲ್ಲಿ ತ್ತು.
ಇಂತಹ ಶೋಚನೀಯ ಜೀವನವನ್ನು ಅರಿತ ಇಲ್ಲಿನ ” ಕುಟುಂಬ ” ಸದಸ್ಯರು ಇವರಿಗೆ ಮನೆ ನಿರ್ಮಾಣ ಮಾಡಿಕೊಡುವ ಪಣತೊಟ್ಟರು.
ಇದಕ್ಕೆ ಸಾಥ್ ನೀಡಿದವರು ಬಂಟ್ವಾಳ ಎಸ್.ಐ.ಚಂದ್ರಶೇಖರ್.
ಅಂತೂ ಇಂತು ಮನೆ ನಿರ್ಮಾಣ ಗೊಂಡಿತ್ತು. ಇಂದು ಮನೆಯ ಹಸ್ತಾಂತರವೂ ನಡೆಯಿತು. ಧಾರ್ಮಿಕ ವಿಧಿ ವಿಧಾನಗಳು ನಡೆದ ಬಳಿಕ ಸಾಂಕೇತಿಕ ವಾಗಿ ಎಲ್ಲಾ ಕಾರ್ಯಕ್ರಮ ಗಳು ನಡೆಯಿತು. ಕಲ್ಲಡ್ಕದ ” ಕುಟುಂಬ ” ಸದಸ್ಯರು ಕೈಗೆತ್ತಿಕೊಂಡ ಉತ್ತಮ ಕಾರ್ಯಕ್ಕೆ ಎಲ್ಲರ ಬಾಯಿಯಿಂದಲೂ ಮೆಚ್ಚಗೆಯ ಮಾತುಗಳು ಕೇಳಿಬಂದಿವೆ.