ಬಂಟ್ವಾಳ: ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಶ್ರೀ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ ಸುಮಾರು 3 ಕೋ.ರೂ. ವೆಚ್ಚದಲ್ಲಿ ಶಿಲಾಮಯವಾಗಿ ಪುನರ್ನಿರ್ಮಾಣಗೊಳ್ಳುತ್ತಿದ್ದು, ಮುಂಬರುವ ಬ್ರಹ್ಮ ಕಲಶೋತ್ಸವ ಇತ್ಯಾದಿ ಕಾರ್ಯಕ್ರಮಗಳ ಬಗ್ಗೆ ಪೂರ್ವಭಾವಿ ಸಮಾಲೋಚನ ಸಭೆ ಕ್ಷೇತ್ರದ ವಠಾರದಲ್ಲಿ ಮಂಗಳವಾರ ಜರಗಿತು.
ಮಾಜಿ ಸಚಿವ, ಸಮಿತಿ ಪುನರ್ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ ಅವರು ಮಾತನಾಡಿ, ಕಕ್ಯಪದವುನಲ್ಲಿ ಆದಿಕಾಲದಿಂದ ಆರಾಧಿಸಿಕೊಂಡು ಬರುತ್ತಿರುವ ಕೋಟಿ-ಚೆನ್ನಯರ ಗರಡಿಯನ್ನು ಸಂಪ್ರದಾಯಬದ್ಧವಾಗಿ ಪುನರ್ನಿರ್ಮಾಣಗೊಳಿಸಲಾಗುತ್ತಿದ್ದು , ದೈವ ದೇವರ ಅನುಗ್ರಹದಿಂದ ಮೇ 19ರಂದು ಬ್ರಹ್ಮಕಲಶೋತ್ಸವ ಸಾಂಗವಾಗಿ ನೆರವೇರಲಿದೆ. ಈ ಪುಣ್ಯ ಕಾರ್ಯದಲ್ಲಿ ಸರ್ವರೂ ಜವಾಬ್ದಾರಿ ವಹಿಸಿ ಭಾಗಿಗಳಾಗಬೇಕು ಎಂದು ಹೇಳಿದರು.
ಎಂ. ಮೋನಪ್ಪ ಪೂಜಾರಿ ಕಂಡೆತ್ಯಾರು ಅವರು ಇದುವರೆಗಿನ ಕಾಮಗಾರಿಗಳ ಲೆಕ್ಕ ಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ಬ್ರಹ್ಮ ಕಲಶೋತ್ಸವದ ಸ್ವಾಗತ ಸಮಿತಿಯನ್ನು ಘೋಷಿಸಲಾಯಿತು. ಗೌರವಾಧ್ಯಕ್ಷರಾಗಿ ಬಿ.ರಮಾನಾಥ ರೈ, ಸಂಚಾಲಕರಾಗಿ ಕಂಕನಾಡಿ ಗರಡಿಯ ಸಂಚಾಲಕ ಚಿತ್ತರಂಜನ್, ಅಧ್ಯಕ್ಷರಾಗಿ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಕಾರ್ಯಾಧ್ಯಕ್ಷರಾಗಿ ಬಿ. ಪದ್ಮಶೇಖರ ಜೈನ್ ಹಾಗೂ ಮತ್ತಿತರ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅನುಮೋದಿಸಲಾಯಿತು.
ಪುತ್ತೂರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಜಯಂತ ನಡುಬಲು, ಉಪಾಧ್ಯಕ್ಷ ಎ. ಚೆನ್ನಪ್ಪ ಸಾಲ್ಯಾನ್, ಕ್ಷೇತ್ರದ ತಾಂತ್ರಿಕ ತಜ್ಞ ಪ್ರಮಲ್ ಕುಮಾರ್ ಕಾರ್ಕಳ ಕ್ಷೇತ್ರದ ತಂತ್ರಿ ರಾಜೇಂದ್ರ ಅರ್ಮುಡ್ತಾಯ, ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಪುನರ್ನಿರ್ಮಾಣ ಸಮಿತಿ ಅಧ್ಯಕ್ಷ ಬಿ. ಪದ್ಮಶೇಖರ ಜೈನ್, ಪದಾಧಿಕಾರಿಗಳಾದ ರಾಜವೀರ ಜೈನ್ ಬಾರ್‍ದಡ್ಡುಗುತ್ತು, ಬೇಬಿ ಕುಂದರ್, ಸಂಪತ್ ಕುಮಾರ್ ಶೆಟ್ಟಿ, ಸಂಜೀವ ಪೂಜಾರಿ ಗುರುಕೃಪಾ, ರವಿ ಪೂಜಾರಿ ಚಿಲಿಂಬಿ, ಜಯಂತ ನಡುಬಲು, ಗಣೇಶ್ ಪೂಜಾರಿ ಗುರುಪುರ, ಜಯಶೆಟ್ಟಿ ಕಿಂಜಾಲು, ಪುರುಷೋತ್ತಮ ಪೂಜಾರಿ ಮಜಲು, ಬೇಬಿ ಕೃಷ್ಣಪ್ಪ, ಡಾ. ದಿನೇಶ್ ಬಂಗೇರ, ಎಲ್‌ಸಿಆರ್ ಕಾಲೇಜು ಪ್ರಾಂಶುಪಾಲ ಪ್ರವೀಣ್ ಎಂ., ದಯಾನಂದ ಶೆಟ್ಟಿ ಅಮೈ, ಶರತ್ ಕುಮಾರ್ ಕೇದಗೆ, ಸಂಜೀವ ಪೂಜಾರಿ ಕೇರ್ಯ, ಧರ್ಣಪ್ಪ ಪೂಜಾರಿ ಕೋಂಗುಜೆ, ಗುಣ ಶೇಖರ ಕೊಡಂಗೆ, ರವಿ ಕಕ್ಯಪದವು(ಸುಬ್ರಹ್ಮಣ್ಯ), ಉತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್‌ಬಿತ್ತ, ಸುಂದರ ಪೂಜಾರಿ ಬೋಳಂಗಡಿ, ಆನಂದ ಆಳ್ವ , ಚಂದ್ರಶೇಖರ ಕಂರ್ಬಡ್ಕ, ವಾಸುದೇವ ಮಯ್ಯ, ಗಣೇಶ್ ಕೆ., ರಾಮಯ್ಯ ಭಂಡಾರಿ, ಪವನ್ ಕಕ್ಯಪದವು, ತಿಲಕ್ ಪೂಜಾರಿ, ವೀರೇಂದ್ರ ಕುಮಾರ್ ಜೈನ್, ಬಾಬು ನಾಯ್ಕ, ಪರಮೇಶ್ವರ ನಾಯ್ಕ, ರಾಜೀವ ಕಕ್ಯಪದವು, ಹೇಮಂತ ಕುಮಾರ್, ನಾರಾಯಣ ಪೂಜಾರಿ ಬಿತ್ತ, ಗುರುಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಡೀಕಯ್ಯ ಬಂಗೇರ ಸ್ವಾಗತಿಸಿದರು. ಡಾ| ರಾಜರಾಮ ಕೆ.ಬಿ. ವಂದಿಸಿದರು, ಡೀಕಯ್ಯ ಕುಲಾಲ್ ಮತ್ತು ಎಂ. ಮೋನಪ್ಪ ಪೂಜಾರಿ ಕಂಡೆತ್ಯಾರು ಕಾರ್ಯಕ್ರಮ ನಿರೂಪಿಸಿದರು.


