ಬಂಟ್ವಾಳ: ತಂದೆ ತಾಯಿ‌ಇಬ್ಬರೂ ಡಾಕ್ಟರ್ ಆದರೆ ನನಗೆ ಡಾಕ್ಟರ್ ಆಗುವ ಆಸಕ್ತಿ ಇಲ್ಲ. ಇಸ್ರೋದಲ್ಲಿ ವಿಜ್ಞಾನಿಯಾಗುವ ಆಸೆ ಎಂದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ಬಂಟ್ವಾಳ ವಿದ್ಯಾಗಿರಿಯ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನುಪಮಾ ಕಾಮತ್ ಹೇಳಿದಳು.
ಈ ಫಲಿತಾಂಶ ನನಗೆ ಖುಷಿ ತಂದಿದೆ.


ಇದಕ್ಕೆ ತಂದೆ ತಾಯಿ ಯ ಶ್ರಮ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಇದೆ, ಜೊತೆಗೆ ಶಾಲಾ ಶಿಕ್ಷಕರ ಹಾಗೂ ಸ್ನೇಹಿತರ ಸಹಕಾರದಿಂದ ಇದು ಸಾಧ್ಯವಾಯಿತು ಎಂದು ಅವಳು ಹೇಳಿದ್ದಾಳೆ.

ನನ್ನ ತಾಯಿಯ ತಂದೆ ಇಸ್ರೋದಲ್ಲಿದ್ದವರು. ನನಗೂ ಐಐಟಿಯಲ್ಲಿ ಕಲಿತು ಇಸ್ರೋದಲ್ಲಿ ವಿಜ್ಞಾನಿಯಾಗುವ ಆಸೆ. ಪಿಸಿಎಂಬಿ ತೆಗೆದುಕೊಂಡು ಶಾರದಾ ವಿದ್ಯಾಲಯಲದಲ್ಲಿ ಪಿಯುಸಿ ವಿಜ್ಞಾನ ವಿಷಯ ಆಯ್ಕೆ ಮಾಡುವೆ ಎಂದು ಹೇಳಿದಳು.
ಅವರ ಪ್ರಥಮ ಪುತ್ರಿ ಅನುಪಮಾ ನೃತ್ಯ, ಸಂಗೀತ ಸಹಿತ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದಾಳೆ. ಸದ್ಯ ಮಂಗಳೂರಿನ ಸಿಎಫ್‌ಎಎಲ್ ನಲ್ಲಿ ಐಐಟಿ ಕೋಚಿಂಗ್ ಪಡೆಯುತ್ತಿದ್ದಾಳೆ ಎಂದು ಪೋಷಕರು ತಿಳಿಸಿದ್ದಾರೆ.
ಶಾಲೆಯ ಎಲ್ಲ ಶಿಕ್ಷಕ ವೃಂದ ಮತ್ತು ಆಡಳಿತ ಮಂಡಳಿಯ ಪ್ರೋತ್ಸಾಹ ಕಾರಣ. ಶಾಲೆಯಲ್ಲಿ ಕೊಡುವ ಕೋಚಿಂಗ್ ಅಷ್ಟೇ ನನಗೆ ಮಾರ್ಗದರ್ಶಿ. ನನ್ನ ಸಹಪಾಠಿಗಳೊಂದಿಗೆ ಗ್ರೂಪ್ ಸ್ಟಡಿ ಮಾಡ್ತಿದ್ದೆ. ನನ್ನೊಡನೆ ಗ್ರೂಪ್ ಸ್ಟಡಿ ಮಾಡುತ್ತಿದ್ದ ಎಲ್ಲರಿಗೂ ಉತ್ತಮ ಅಂಕ ಬಂದಿವೆ ಎಂದು ತಿಳಿಸಿದ್ದಾಳೆ
ಕೈಕುಂಜೆಯಲ್ಲಿ ಮನೆ ಮಾಡಿರುವ ವೈದ್ಯ ದಂಪತಿ ಡಾ. ದಿನೇಶ್ ಕಾಮತ್ ಮತ್ತು ಡಾ.ಅನುರಾಧಾ ಕಾಮತ್ ಅವರ ಪುತ್ರಿ.
ಇವಳ ತಾಯಿ ಅನುರಾಧ ಕಾಮತ್ ಅವರು ಕೂಡಾ ರಾಜ್ಯಕ್ಕೆ ಏಳನೇ ಸ್ಥಾನವನ್ನು ಅಂದು ಎಸ್.ಎಸ್.ಎಲ್.ಸಿ.ಯಲ್ಲಿ ಪಡೆದುಕೊಂಡ ಬಗ್ಗೆ ಮಾಧ್ಯಮವರ ಬಳಿ ನೆನೆಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here