ಬಾರದಿರುವ ನಿದ್ದೆಗೆ
ನಿನ್ನ ನಳಿ ತೋಳುಗಳ
ಕನವರಿಕೆ !
ನೀನೇ ತುಂಬಿರುವ
ಒಲವಿನೀ ಎದೆಗೆ
ಅದೆಂಥದೋ ಚಡಪಡಿಕೆ!
****
ಬಂಧನವೆನ್ನದಿರು ನಲ್ಲೆ
ಅಲ್ಲೆ ಇದೆ ನಂದನ
ಕೊಂಚ ತೆರೆದು ಬಿಡು
ತೀಡುವೆ ಒಲವ ಚಂದನ
****
ತೋಳುಗಳಲಿ ತೋಳುಗಳ
ಸೇರಿಸಿ ನುಲಿದು ಬಿಡು
ಒಂದೆ ಆಟ ಸಾಕು ನೀನೆ
ಸಾಕೆನುವೆ ಬಂದು ಬಿಡು
****
ನನ್ನೊಲವ ಮರೆತು
ತನ್ನ ಕಾವ್ಯಲೋಕದಲೇ
ಉಲಿವಳೆನ್ನ ಮನದನ್ನೆ!
ಕಾದು ಕನಲಿದ ನಾನು ನಿತ್ಯ
ಸವರುತ್ತಲೇ ಕಳೆದಿರುವೆ
ತಲೆದಿಂಬಿನ ಕೆನ್ನೆ!

 

#ನೀ.ಶ್ರೀಶೈಲ ಹುಲ್ಲೂರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here