Monday, September 25, 2023
More

    ಡಾ| ಬಿ.ಆರ್.ಅಂಬೇಡ್ಕರ್ ಅವರ  128 ನೇ ಜನ್ಮ ದಿನ ಕಾರ್ಯಕ್ರಮ

    Must read

    ಬಂಟ್ವಾಳ: ತಾಲೂಕು ಪಂಚಾಯತ್ ಬಂಟ್ವಾಳ, ಕಂದಾಯ ಇಲಾಖೆ,  ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಬಂಟ್ವಾಳ ವತಿಯಿಂದ ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ಅವರ  128 ನೇ ಜನ್ಮ ದಿನದ ಕಾರ್ಯಕ್ರಮ ಬಂಟ್ವಾಳ ತಾಲೂಕು ಪಂಚಾಯತ್ ಎಸ್.ಜಿ ಎಸ್ ವೈ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎ.ಆರ್.ಒ.ಮಹೇಶ್ ನೆರವೇರಿಸಿದರು.
    ಬಳಿಕ ಮಾತನಾಡಿದ ಅವರು ಸಂವಿಧಾನ ಶಿಲ್ಪಿ ಡಾ| ಬಿ.ಆರ್ .ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಾಗಿದೆ.
    ಇಂತಹ ಮಹಾನ್ ಪುರುಷರ ಜನ್ಮದಿನವನ್ನು ಆಚರಣೆ ಮಾಡಿ ಅವರ ನೆನಪಿಸುವ ಮತ್ತು ಗೌರವ ಸಲ್ಲಿಸುವ ಉತ್ತಮ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಅವರು ಹೇಳಿದರು.
    ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ಬಂಟ್ವಾಳ ತಹಶಿಲ್ದಾರ ಸಣ್ಣ ರಂಗಯ್ಯ ವಹಿಸಿದ್ದರು.
    ವೇದಿಕೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಶಿಕ್ಷಣಾಧಿಕಾರಿ ಶಿವಪ್ರಕಾಶ್, ಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ, ಸಿ.ಡಿ.ಪಿ.ಒ ಮಲ್ಲಿಕಾ ಉಪಸ್ಥಿತರಿದ್ದರು.
    ಸಮಾಜ ಕಲ್ಯಾಣ ಇಲಾಖೆ ಯ ಸಹಾಯಕ ನಿರ್ದೇಶಕ ಕೆ.ಮೋಹನ್ ಕುಮಾರ್ ಸ್ವಾಗತಿಸಿ ಇ.ಒ.ರಾಜಣ್ಣ ವಂದಿಸಿದರು.

    More articles

    LEAVE A REPLY

    Please enter your comment!
    Please enter your name here

    Latest article