ಬಂಟ್ವಾಳ, ಎ. ೩೦: ನವವಿವಾಹಿತನಾಗಿದ್ದ ಒಕ್ಕೆತ್ತೂರು ಉಮರ್ (ಲಕ್ಸುರಿ ಮೋನುಚ್ಚ) ಅವರ ಪುತ್ರ ನಿಝಾಮ್ (೩೦) ಅವರು ಸೋಮವಾರ ರಾತ್ರಿ ಮನೆಯಲ್ಲಿ ಮಲಗಿದ್ದವರು ಮಂಗಳವಾರ ಬೆಳಗ್ಗೆ ಎಚ್ಚರಿಸುವಾಗ ಮೃತಪಟ್ಟಿದ್ದು, ಹೃದಯಾಘಾತದಿಂದ ನಿಧನರಾಗಿದ್ದಾರೆಂದು ಕುಟುಂಬ ಮೂಲಗಳು ತಿಳಿಸಿವೆ.
ಸೌದಿ ಅರೇಬಿಯಾದಲ್ಲಿ ಉದ್ಯೋಗಕ್ಕೆ ತೆರಳಿದ್ದ ನಿಝಾಮ್ ಮದುವೆಗಾಗಿ ಕಳೆದ ೩ ತಿಂಗಳ ಹಿಂದೆ ಊರಿಗೆ ಬಂದಿದ್ದರು. ಇವರು ಕಳೆದ ಮಾರ್ಚ್ ೨೪ರಂದು ಪೆರ್ಲ ಮೂಲದ ವಧುವಿನೊಂದಿಗೆ ವಿವಾಹವಾಗಿದ್ದರು. ವಧು ಬರಾಅತ್ ಸಂದರ್ಭ ತವರು ಮನೆಗೆ ಹೋಗಿದ್ದಳು. ನಿಧನದ ಸಮಯದಲ್ಲಿ ಆಕೆ ಮನೆಯಲ್ಲಿ ಇರಲಿಲ್ಲ. ಎದೆನೋವು ಎಂದು ತಡರಾತ್ರಿ ಎದ್ದು ಔಷಧಿ ನೀರು ಕುಡಿದು ಮತ್ತೆ ಮಲಗಿದ್ದರು. ಆದರೆ, ಬೆಳಗ್ಗೆ ನೋಡುವಾಗ ನಿಧನರಾಗಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here