*ತುಂಬೆ : ದಪ್ ಸ್ಪರ್ಧೆ ಬಿ.ಸಿ.ರೋಡ್ ತಂಡಕ್ಕೆ ಪ್ರಶಸ್ತಿ*
ಬಂಟ್ವಾಳ : ತುಂಬೆ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ 7ನೇ ಸ್ವಲಾತ್ ವಾರ್ಷಿಕ ಹಾಗೂ 3ನೇ ಮಜ್ಲಿಸುನ್ನೂರು ವಾರ್ಷಿಕದ ಪ್ರಯುಕ್ತ ದ.ಕ.ಜಿಲ್ಲಾ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮವು ಇಲ್ಲಿನ ಬಿ.ಎ.ಮೈದಾನದಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತುಂಬೆ ಹಿದಾಯತುಲ್ ಇಸ್ಲಾಂ ಮದ್ರಸ ಮುಖ್ಯ ಶಿಕ್ಷಕ ಯೂಸುಫ್ ಮುಸ್ಲಿಯಾರ್ ಮಾತನಾಡಿ ಇಂದಿನ ಮಕ್ಕಳಿಗೆ ಲೌಕಿಕ, ಧಾರ್ಮಿಕ ಶಿಕ್ಷಣದ ಜೊತೆಗೆ ಇಸ್ಲಾಮಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ದಫ್ ಕಾರ್ಯಕ್ರಮ ಪ್ರೇರಣೆಯಾಗಿದೆ ಎಂದರು.


ತುಂಬೆ ಎಂ.ಜೆ.ಎಂ.ಅದ್ಯಕ್ಷ ಅಬ್ದುರ್ರಹ್ಮಾನ್ ಹದ್ದಾದಿ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬರಾದ ಅಬ್ದುಲ್ ಲತೀಫ್ ಫೈಝಿ ದುಃಹಾ ನೆರವೇರಿಸಿದರು. ದಫ್ ಎಸೋಸಿಯೇಶನ್ ದ.ಕ.ಮತ್ತು ಉಡುಪಿ ಜಿಲ್ಲಾದ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದರು.
ತುಂಬೆ ಮದ್ರಸ ಶಿಕ್ಷಕರುಗಳಾದ ಅಬ್ದುಲ್ ರಹೀಂ ಅಝ್ ಅರಿ, ಇಸ್ಮಾಯಿಲ್ ಮುಸ್ಲಿಯಾರ್, ಇಮ್ತಿಯಾಝ್ ಅಝ್ ಅರಿ, ಮುಹಮ್ಮದ್ ಬಶೀರ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.
ತುಂಬೆ ಎಂ.ಜೆ.ಎಂ.ಪ್ರದಾನ ಕಾರ್ಯದರ್ಶಿ ಟಿ.ಎಂ.ಮೂಸಬ್ಬ ಸ್ವಾಗತಿಸಿ ವಂದಿಸಿದರು. ಮುಹಮ್ಮದ್ ಖಲಂದರ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.

*ಕೈಕಂಬ – ಬಿ.ಸಿ.ರೋಡ್ ತಂಡಕ್ಕೆ ಪ್ರಶಸ್ತಿ*
ದ.ಕ.ಜಿಲ್ಲಾ ಮಟ್ಟದ ದಫ್ ಸ್ಪರ್ಧೆಯಲ್ಲಿ ಕೈಕಂಬ – ಬಿ.ಸಿ.ರೋಡ್ ನ ರಿಫಾಯಿಯ ದಫ್ ಕಮಿಟಿ ಪ್ರಥಮ ಹಾಗೂ ಪುತ್ತೂರಿನ ಕರವಡ್ತ ವಲಿಯುಲ್ಲಾಹಿ ದಫ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಆರ್.ಕೆ.ಮದನಿ ಅಮ್ಮೆಂಬಳ, ಅಬುಲ್ ಉವೈಸ್, ಅಬ್ದುಲ್ ರಹಮಾನ್ ತೀರ್ಪುಗಾರರಾಗಿ ಸಹಕರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here